ರಾಯಚೂರು:– ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಜರುಗಿದೆ.
ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ರಾಯಚೂರಿನಿಂದ ಮಂತ್ರಾಲಯ ಮಾರ್ಗವಾಗಿ ಬಸ್ ಹೊರಟಿದ್ದು, ರಾಯಚೂರು ಮಾರ್ಗವಾಗಿ ಬೈಕ್ನಲ್ಲಿ ಸವಾರರು ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮೂವರ ಶವಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.