ಕಲಬುರಗಿ:- ಪ್ರಧಾನಿ ಮೋದಿ ಕರೆ ಕೊಟ್ಟಿರುವ ಸ್ವಚ್ಛತಾ ಅಭಿಯಾನ ಕಲಬುರಗಿಯಲ್ಲಿ ಇವತ್ತು ಜೋರಾಗಿ ನಡೆಯಿತು. ನಗರದ ಶರಣಬಸವೇಶ್ವರ ಗುಡಿ ಅಂಗಳದಲ್ಲಿ ಸಂಜೆ ಇಡೀ ಕೇಸರಿ ಪಡೆಯ ಘಟಾನುಘಟಿ ನಾಯಕರೆಲ್ಲ ಸೇರಿ ದೇಗುಲದ ಕಸಗೂಡಿಸಿದ್ರು ನೆಲ ಒರೆಸಿದ್ರು..
ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಸಂಸದ ಉಮೇಶ್ ಜಾಧವ್ ಶಾಸಕ ಬಸವರಾಜ ಮತ್ತಿಮೂಡ್ ನಗರಾಧ್ಯಕ್ಷ ಚಂದು ಪಾಟೀಲ್ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಸೇರಿ ಬಹುತೇಕ ನಾಯಕರು ಹಾಗು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ರು. .