ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ತಾವು ಮೊಟ್ಟ ಮೊದಲು ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಈ ಖುಷಿಯಲ್ಲಿ ಪತ್ನಿಗೆ ಮೆಸೇಜ್ ತಿಳಿಸಿದ್ದ ಅಧಿಕಾರಿಯ ಶವ ಮರುದಿನ ನದಿಯಲ್ಲಿ ಪತ್ತೆಯಾಗಿದೆ.
35 ವರ್ಷದ ಪೊಲೀಸ್ ಅಧಿಕಾರಿ ರಾಬರ್ಟ್ ಜಾನ್ ಲಿಯೊನಾರ್ಡ್ ಟೆನ್ನೆಸ್ಸೀ ರಾಜ್ಯದಲ್ಲಿ ಹೊಸದಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಪ್ರೇಮಿಗಳ ದಿನದಂದು ರಾತ್ರಿ 10 ಗಂಟೆ ಸುಮಾರಿಗೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇತುವೆ ಮೇಲೆ ಜಗಳವಾಡುತ್ತಿದ್ದಾರೆ ಎನ್ನುವ ಮಾಹಿತಿ 911 ಮೂಲಕ ಪೊಲೀಸರಿಗೆ ತಲುಪಿತ್ತು. ಈ ವೇಳೆ ಮಹಿಳೆಯನ್ನು ಜಾನ್ ಲಿಯೋನಾರ್ಡ್ ಬಂಧಿಸಿದ್ದರು.ಇದು ಅವರ ಮೊದಲ ಬಂಧನವಾಗಿದ್ದು, ಪತ್ನಿಗೆ ಈ ಕುರಿತು ಸಂದೇಶ ಕಳುಹಿಸಿದ್ದರು.
ಆದರೆ ಆ ಬಳಿಕ ಲಿಯೋನಾರ್ಡ್ ಮೊಬೈಲ್ ಸ್ಪಿಚ್ ಆಫ್ ಆಗಿದೆ. ಬಳಿಕ ಶೋಧ ತಂಡ ಹುಡುಕಾಟ ಆರಂಭಿಸಿತ್ತು. ಪೊಲೀಸರು ಕಾರನ್ನು ಪತ್ತೆ ಹಚ್ಚಲು ಉಪಗ್ರಹ ಟ್ರ್ಯಾಕಿಂಗ್ ಬಳಸಿದ್ದಾರೆ, ಗುರುವಾರ ಟೆನ್ನೆಸ್ಸೀ ನದಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಆತ ಬಂಧಿಸಿದ್ದ ಮಹಿಳೆ ಇಬ್ಬರ ಶವವು ಪತ್ತೆಯಾಗಿದೆ.
ಕಾರು ನದಿಗೆ ಹೇಗೆ ಬಿದ್ದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಲಿಯೋನಾರ್ಡ್ ಈ ಮೊದಲು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಪೊಲೀಸ್ ಕೆಲಸ ಸಿಕ್ಕಿತ್ತು. ಅವರು ಡಿಸೆಂಬರ್ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಲಿಯೋನಾರ್ಡ್ಗೆ ಐದು ಮಕ್ಕಳಿದ್ದಾರೆ.