ನೀಲಿ ಚಿತ್ರಗಳ ಖ್ಯಾತ ನಟಿ, ಅಂಸಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆಚ್ಚಿನ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಭಿಮಾನಿಗಳು ಕಂಗಾಲಾಗಿದ್ದಾರೆ.
ಮೃತ ಕೆನಿ ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
36ರ ವಯಸ್ಸಿನ ಕೆನಿ ಲಿನ್ ಕಾರ್ಟರ್ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಖಚಿತ ಪಡಿಸಿದೆ. ಕೆನಿ ಲಿನ್ ಕಾರ್ಟರ್ ಕೇವಲ ನೀಲಿತಾರೆ ಮಾತ್ರ ಆಗಿರಲಿಲ್ಲ. ನೃತ್ಯಗಾರ್ತಿ ಹಾಗೂ ಗಾಯಕಿಯಾಗಿಯೂ ಖ್ಯಾತಿ ಘಳಿಸಿದ್ದರು.
2000 ಇಸವಿಯಲ್ಲಿ ವಯಸ್ಕರ ಸಿನಿಮಾಗಳ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದ ಕೆನಿ ಬರೋಬ್ಬರಿ 20 ವರ್ಷಗಳ ಕಾಲ ಅದೇ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ತಮ್ಮದೇ ಸ್ಟುಡಿಯೋ ಶುರು ಮಾಡಿ, ಪೋಲ್ ಡಾನ್ಸಿಂಗ್ ನಲ್ಲೂ ಸಕ್ರೀಯರಾಗಿದ್ದರು.
ಕೆನಿ ಲಿನ್ ಕಾರ್ಟರ್ ನಿಧನದಿಂದಾಗಿ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಅವರ ತಾಯಿಯ ಮುಂದಿನ ಬದುಕಿಗಾಗಿ ನಟಿಯ ಆಪ್ತ ಬಳಗ ಹಣ ಸಂಗ್ರಹಕ್ಕೂ ಮುಂದಾಗಿದೆ ಎಂದು ಮಾಧ್ಯಮಗಳ ವರದಿ ಯಲ್ಲಿ ಉಲ್ಲೇಖಿಸಿದೆ.