ದೊಡ್ಡಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಕುಂಬಾರ ಸಮುದಾಯದಿಂದ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ವೆಂಕಟಾಚಲಯ್ಯ ಮಾತನಾಡಿ, ಕುಂಬಾರರ ದೇವರು ಸರ್ವಜ್ಞ ಜಯಂತಿಯನ್ನು ಹಾಡೋ ನಹಳ್ಳಿ ಗ್ರಾಮದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಈ ಮೂಲಕವಾದರೂ ಸಮಾಜ ಸಂಘಟಿತವಾಲಿ. ಎಲ್ಲರೂ ಕವಿ ಸರ್ವಜ್ಞನ ತತ್ವ ಆದರ್ಶ ಗಳನ್ನು ಪಾಲಿಸಿದರೆ ಉತ್ತಮವಾಗಿ ಜೀವನ ಸಾಗಿಸಬಹುದು.
೧೭ ನೆ ಶತಮಾನದಲ್ಲಿಯೇ ಬೀ ದಿ ಬೀದಿ ಅಲೆಯುತ್ತ ಸಮ ಸಮಾಜಕ್ಕೆ ದುಡಿದ ಮಹಾನ್ ವ್ಯಕ್ತಿ ಆಗಿದ್ದಾರೆ. ನಮ್ಮ ಸಮಾಜ ಏಳಿಗೆಗೆ ನಾವೆಲ್ಲ ದುಡಿಯುತ್ತಿದ್ದೇನೆ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಈಗಾಗಲೇ ಸಮಾಜದ ಕಲ್ಯಾಣ. ಮಂಟಪ ಶ್ರೀ ಕ್ಷೇ ತ್ರ ಘಾಟಿ ಯಲ್ಲಿ ನಿರ್ಮಾಣವಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಪ್ಪಯಣ್ಣ ಮಾತನಾಡಿ, ಕುಂಬಾರರ ಸಮುದಾಯ ಅತ್ಯಂತ ಕಷ್ಟದ ಜೀವನ ನಡೆಸುತ್ತಿದೆ. ಈಗೀಗ ಸಮಾಜ ಬೆಳಕಿಗೆ ಬರುತ್ತಿದೆ. ತಾರತಮ್ಯ ಮಾಡದೆ ಸವಲತ್ತು ತಲುಪಿಸಲು ಶ್ರಮಿಸುತ್ತೇನೆ. ಅಲ್ಲದೆ ಗ್ರಾಮ ಪಂಚಾಯಿತಿ ಯಲ್ಲಿ ಬಡ್ಡಿ ರಹಿತ ಸಾಲ ಸೌಲಭ್ಯ ವಿದ್ದು ಸಾಲ ಸದ್ಬಳಕೆ ಯಿಂದ ಆರ್ಥಿಕವಾಗಿ ಸಬಲರಾಗಬೇಕೆಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ನಾಗರಾಜು ಮಾತನಾಡಿ, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು ೧೭ ಶತಮಾನದಲ್ಲಿಯೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಸರ್ವಜ್ಞ. ಪ್ಲಾಸ್ಟಿಕ್ ಅಬ್ಬರದಿಂದಾಗಿ ಮಣ್ಣಿನ ಮಡಿಕೆಗಳ ಪ್ರಭಾವ ಕುಂಠಿತವಾಗಿದೆ. ಹೀಗಾಗಿ ನಮ್ಮ ಕುಲ ಕಸುಬಿಗೆ ಪ್ರೋತ್ಸಾಹದ ಜೊತೆಗೆ ಮಾರಾಟ ಮಾಡಲು ಅಗತ್ಯವಾದ ಜಾಗವನ್ನು ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷರಾದ ಮುನೇಗೌಡ, ಘಾಟಿ ಕುಂಬಾರ ಛತ್ರದ ಪದಾಧಿಕಾರಿ ಜಯರಾಮಯ್ಯ, ಮುಖಂಡರಾದ ಸುಬ್ರಮಣಿ, ಚೌಡಪ್ಪ, ನಂಜಪ್ಪ, ಗುಂಡಪ್ಪ ಸೇರಿದಂತೆ ಬಚ್ಚಹಳ್ಳಿ ರಾಜಣ್ಣ, ಕೃಷಮೂರ್ತಿ , ಚಿನ್ನಪ್ಪ, ರಾಮಾಂಜಿನಿ, ನಾಗರಾಜಪ್ಪ, ಗಂಗಾಧರಪ್ಪ ಮತ್ತಿತರರು ಇದ್ದರು.