ಸಂಜೆ ವೇಳೆ ಸ್ನ್ಯಾಕ್ಸ್ ಆಗಿ ಮನೆಯಲ್ಲಿ ತಯಾರಿಸಲು ಸಾಕಷ್ಟು ತಿಂಡಿಗಳಿವೆ. ಹಾಗಾಗಿ ಜನರು ಕಾಮನ್ ಆಗಿ ಬೋಂಡಾ, ಬಜ್ಜಿ, ಚಿಪ್ಸ್ನಂತಹ ಪದಾರ್ಥಗಳನ್ನು ಬೇಗ ಮಾಡಬಹುದು ಅಂತ ಮಾಡ್ತಾರೆ. ಆದರೆ ಬೋಂಡಾ, ಪಕೋಡಾ, ಬಜ್ಜಿಯಷ್ಟೇ ಅಲ್ಲ, ಇದಕ್ಕಿಂತಲೂ ಸ್ಪೆಷಲ್ ಆಗಿ ನೀವು ಮನೆಯಲ್ಲಿಯೇ ಉದ್ದಿನಬೇಳೆಯಲ್ಲಿ ವಡೆ ಮಾಡಿ.
ಇದು ಸಿಕ್ಕಾಪಟ್ಟೆ ಟೇಸ್ಟಿ ಆಗಿರುತ್ತದೆ. ಇದರೊಂದಿಗೆ ನಿಮಗಿಷ್ಟವಿದ್ದರೆ ಬೋಂಡಾನೂ ಮಾಡಬಹುದು. ಇನ್ನೂ ಮಕ್ಕಳನ್ನು ಬಾಯಿ ಚಪ್ಪಾರಿಸಿಕೊಂಡು ಈ ತಿಂಡಿಯನ್ನು ಬೇಡ ಎಂದು ಹೇಳದೇ ತಿನ್ನುವುದು ಗ್ಯಾರಂಟಿ. ಹಾಗಾದ್ರೆ ಸಂಜೆ ಸ್ನ್ಯಾಕ್ಸ್ ಆಗಿ ಈ ಬೋಂಡಾ ಮಾಡುವುದು ಹೇಗೆ ಎಂದು ತಿಳಿಯೋಣ.
ಉದ್ದಿನಬೇಳೆ ಬೋಂಡಾ ಮಾಡಲು ಬೇಕಾಗುವ ಸಾಮಗ್ರಿಗಳು:-
ಉದ್ದಿನಬೇಳೆ – 1 ಕಪ್
ಅಕ್ಕಿಹಿಟ್ಟು – 2 ಟೀ ಸ್ಪೂನ್
ಹಸಿಮೆಣಸಿನಕಾಯಿ – 2
ಮೆಣಸಿನಪುಡಿ – ಅರ್ಧ ಟೀ ಸ್ಪೂನ್
ಈರುಳ್ಳಿ – 2
ಕೊತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾಗುವಷ್ಟು
ಉದ್ದಿನಬೇಳೆ ಬೋಂಡಾ ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ 1 ಕಪ್ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು, 1 ಗಂಟೆಯ ಕಾಲ ನೆನೆಸಿಡಬೇಕು. 1 ಗಂಟೆಯ ನಂತರ ಉದ್ದಿನಬೇಳೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಮೆತ್ತಗೆ, ಸ್ವಲ್ಪೇ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಬೇಕು.
ರುಬ್ಬಿಟ್ಟಿರುವ ಉದ್ದಿನಬೇಳೆ ಹಿಟ್ಟನ್ನು ಒಂದು ಬೌಲ್ನಲ್ಲಿ ಹಾಕಿಕೊಂಡು ಅದಕ್ಕೆ, 2 ಟೀ ಸ್ಪೂನ್ ಅಕ್ಕಿಹಿಟ್ಟು, ಸಣ್ಣದಾಗಿ ಹಚ್ಚಿದ 2 ಮೆಣಸಿನಕಾಯಿ, (ಮೆಣಸಿನಕಾಯಿ
ಬದಲು ಅಚ್ಚಖಾರದ ಪುಡಿ 1 ಟೀ ಸ್ಪೂನ್ ಬಳಸಬಹುದು), ಅರ್ಧ ಟೀ ಸ್ಪೂನ್ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಇದೇ ಮಿಶ್ರಣಕ್ಕೆ ಸಣ್ಣದಾಗಿ ಹಚ್ಚಿರುವ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಬೇಕು.
ಸ್ಟೌವ್ ಮೇಲೆ ಬಾಣಲಿ ಇಟ್ಟು ಅದಕ್ಕೆ ಕರಿಯಲು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ ಸ್ಪೂನ್ನಲ್ಲಿ ಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಬೇಕು. ಫ್ರೈ ಆದ ಬೋಂಡಾವನ್ನು ತೆಗೆದು ತಟ್ಟೆಯಲ್ಲಿ ಸರ್ವ್ ಮಾಡಿದರೆ, ಬಿಸಿ-ಬಿಸಿಯಾದ ಉದ್ದಿನ ಬೇಳೆ ಬೋಂಡಾ ಸವಿಯಲು ಸಿದ್ಧ.
ಈ ಸ್ಪೆಷಲ್ ಬೋಂಡಾವನ್ನು ಕಾಯಿ ಚಟ್ನಿ, ಟೊಮೆಟೋ ಚಟ್ನಿ, ಟೊಮೆಟೋ ಕೆಚಪ್ ಅಥವಾ ಸಾಸ್ ಜೊತೆ ತಿನ್ನಬಹುದು. ಬೋಂಡಾ ಗರಿಗರಿಯಾಗಿ, ಒಳಗಡೆ ಮೆತ್ತಗೆ ತಿನ್ನಲು ರುಚಿಕರವಾಗಿ ಇರುತ್ತದೆ.