ಸಣ್ಣ ವಿಚಾರಕ್ಕೆ ದುಃಖವಾದರೂ ಅಳು ಉಮ್ಮಳಿಸಿ ಬರುತ್ತದೆ. ಒಮ್ಮೊಮ್ಮೆ ಖುಷಿಯಲ್ಲೂ ನಮಗೆ ಅಳು ಬರುತ್ತದೆ. ನಿರ್ದಿಷ್ಟ ಸನ್ನಿವೇಶದಲ್ಲಿ ಕೆಲವು ನರವೈಜ್ಞಾನಿಕ ಪರಿಸ್ಥಿತಿಗಳು ನಮ್ಮನ್ನು ನಗುವಂತೆ ಅಥವಾ ಅಳುವಂತೆ ಮಾಡುವ ಕಾರಣ, ಇದೆಲ್ಲಾ ಸಾಧ್ಯ ಎನ್ನುತ್ತದೆ ವಿಜ್ಞಾನ ಲೋಕ.
ಸಣ್ಣಪುಟ್ಟ ವಿಚಾರಕ್ಕೂ ಅಳು ಬರುತ್ತದೆ
ಒಮ್ಮೊಮ್ಮೆಯಂತೂ ಸಣ್ಣ-ಪುಟ್ಟ ವಿಚಾರಕ್ಕೂ ಕಣ್ತುಂಬಿಕೊಳ್ಳುತ್ತೇವೆ. ಇನ್ನೂ ಕೆಲವು ಸರಿ ಕಾರಣಾನೇ ಇರಲ್ಲ ಆದರೂ ಅಳು ಬರುತ್ತದೆ. ಈ ಅಳುವಿಗೆ ಮನಸ್ಸನ್ನು ಹಾಯಾಗಿಸುವ ಶಕ್ತಿ ಇದೆ ಅನ್ನೋದಂತೂ ಒಪ್ಪಿಕೊಳ್ಳಲೇಬೇಕು. ಯಾವುದೇ ದುಃಖ, ಬೇಸರವನ್ನು ಅತ್ತು ಸಮಾಧಾನ ಮಾಡಿಕೊಳ್ಳಬಹುದಾದ ಶಕ್ತಿ ಇದೆ ಮಾನವರಿಗೆ.
ನೀವು ಜೋರಾಗಿ ಅಳುವುದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ, ದುಃಖ ದೂರವಾಗುತ್ತದೆ. ಅಳುವುದರಿಂದ ಕಣ್ಣುಗಳು ಸ್ವಚ್ಛಗೊಳ್ಳುತ್ತವೆ. ಕಣ್ಣೀರು ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅನೇಕ ರೀತಿಯ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ ಎನ್ನಲಾಗಿದೆ.
ಆದಾಗ್ಯೂ ತುಂಬಾ ಸಿಲ್ಲಿ ವಿಚಾರಕ್ಕೆ ಯಾಕೆ ಅಳು ಬರುತ್ತದೆ ಅನ್ನೋದು ದೊಡ್ಡ ಪ್ರಶ್ನೆ.
ಒಂದು ಸಣ್ಣ ಕಪ್ ಒಡೆದು ಹೋದರೂ ನಮಗೆ ಅಳು ಬರಬಹುದು. ಆ ಮುರಿದ ಕಪ್ನ ತುಂಡುಗಳು ನಮ್ಮೊಳಗೆ ಏನನ್ನೋ ಪ್ರಚೋದಿಸುತ್ತದೆ ಅದು ನಮ್ಮನ್ನು ಅಳುವಂತೆ ಮಾಡುತ್ತದೆ. ಸನ್ನಿವೇಶಗಳಿಗೆ ನಮ್ಮ ಪ್ರತಿಕ್ರಿಯೆಗಳು ನಮ್ಮ ಹಿಂದಿನ ಅನುಭವಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ.
ಏನಂತಾರೆ ವೈದ್ಯರು?
ಫರಿದಾಬಾದ್ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಅಸೋಸಿಯೇಟ್ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ ತ್ರಿದೀಪ್ ಚೌಧರಿ ನಾವು ಕೆಲವೊಮ್ಮೆ ಸಣ್ಣ ವಿಷಯಗಳಿಗೆ ಏಕೆ ಅಳುತ್ತೇವೆ ಎಂಬುದನ್ನು ವಿವರಿಸಿದ್ದಾರೆ ನೋಡಿ.
ನಾವು ಚಿಕ್ಕ ವಿಷಯಗಳಿಗೆ ಅಳಲು ಕಾರಣಗಳು
ಡಾ ಚೌಧರಿ ಹೇಳುವ ಪ್ರಕಾರ, ವಿಭಿನ್ನ ಸಮಸ್ಯೆಗಳ ಬಗ್ಗೆ ಕೆಟ್ಟ ಭಾವನೆ ಮತ್ತು ನಂತರ ಭಾವನೆಗಳನ್ನು ವ್ಯಕ್ತಪಡಿಸುವುದು, ವಿಭಿನ್ನ ಜನರಿಗೆ ಮಿತಿ ವಿಭಿನ್ನವಾಗಿರುತ್ತದೆ.
ಯಾವುದಾದರೂ ನಮಗೆ ಅನುಸಾರವಾಗಿಲ್ಲದಿರುವಾಗ ಅಥವಾ ನಮಗೆ ಸ್ವೀಕಾರಾರ್ಹವಲ್ಲದ ಏನಾದರೂ ಸಂಭವಿಸಿದಾಗ ನಾವು ಹೇಗೆ ಭಾವಿಸುತ್ತೇವೆ ಎಂಬುವುದರ ಮೇಲೂ ಕಣ್ಣೀರು ಬರಬಹುದು.
ಈ ಭಾವನೆಗಳನ್ನು ನಾವು ಹೇಗೆ ವ್ಯಕ್ತಪಡಿಸುತ್ತೇವೆ ಎಂಬುದು ನಮ್ಮ ನಿಭಾಯಿಸುವ ಕೌಶಲ್ಯಗಳ ಮೇಲೆ ಅವಲಂಬಿತವಾಗಿರುತ್ತದೆ ಅಥವಾ ನಮ್ಮ ಹಿಂದಿನ ಅನುಭವಗಳು ಅವುಗಳಿಗೆ ಪ್ರತಿಕ್ರಿಯಿಸಲು ಕಾರಣವಾಗುತ್ತದೆ ಎಂದಿದ್ದಾರೆ.
ಭಾವನೆಗೆಳಿಗೆ ಪ್ರತಿಕ್ರಿಯೆ
ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ, ನಾವು ಸಾಮಾನ್ಯವಾಗಿ ಅಗಾಧ ಭಾವನೆಗಳನ್ನು ಹೊಂದಿರುತ್ತೇವೆ. ಇದು ನಮ್ಮ ಹಿಂದಿನ ಅನುಭವಗಳು ಮತ್ತು ಈ ನಡವಳಿಕೆಗಳನ್ನು ನಮ್ಮ ಸುತ್ತಮುತ್ತಲಿನವರು ಹೇಗೆ ರೂಪಿಸಿದ್ದಾರೆ ಎಂಬುದು ಈ ಅಗಾಧ ಭಾವನೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ.
ನಾವು ನಮ್ಮ ಭಾವನೆಗಳನ್ನು ಚೆನ್ನಾಗಿ ಕಂಟ್ರೋಲ್ ಮಾಡುವವರಾಗಿದ್ದರೆ ನಾವು ಸರಿಯಾದ ಸಮಯ ಮತ್ತು ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂದಿದ್ದಾರೆ ಡಾ ಚೌಧರಿ.
ಇನ್ನೊಂದು ಪ್ರಕಾರ ನೋಡುವುದಾದರೆ, ಆತಂಕ, ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಹಾರ್ಮೋನ್, ಸ್ಯೂಡೋಬಲ್ಬಾರ್ ಅಫೆಕ್ಟ್, ಹೃದಯ ದುರ್ಬಲ ಹೀಗೆ ಇವುಗಳ ಹಿನ್ನೆಲೆಯ ಕಾರಣವೂ ಅಳು ಬರಬಹುದು.
ಭಾವನೆಗಳನ್ನು ಹೇಗೆ ಕಂಟ್ರೋಲ್ ಮಾಡೋದು?
ಸಾಮಾನ್ಯವಾಗಿ, ಅಳು, ನಗು, ಬೇಸ, ಖುಷಿ, ಸಿಟ್ಟುಗನ್ನು ಕಂಟ್ರೋಲ್ ಮಾಡಲು ಋಣಾತ್ಮಕ ಭಾವನೆಗಳಿಗೆ ಒಮ್ಮೆಗೆ ಪ್ರತಿಕ್ರಿಯಿಸದಿರುವುದು ಒಳ್ಳೆಯದು. ಪರಿಸ್ಥಿತಿಯನ್ನು ತಿಳಿದುಕೊಂಡು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು. ಈ ನಡವಳಿಕೆಯಿಂದಾಗಿ ಒಬ್ಬರು ತಮ್ಮ ಭಾವನೆಗಳನ್ನು ನಿಯಂತ್ರಿಸಬಹುದು ಎನ್ನುವುದು ವೈದ್ಯರ ಸಲಹೆ.