ನವದೆಹಲಿ:- ಯುಪಿಎಸ್ಸಿ ಪರೀಕ್ಷೆ ಅಷ್ಟು ಸುಲಭದ್ದಾಗಿಲ್ಲ. ಈ ಪರೀಕ್ಷೆಯನ್ನು ಪಾಸ್ ಮಾಡಲು ಅನೇಕ ವರ್ಷಗಳ ಸಮರ್ಪಿತ ಸಿದ್ಧತೆಯ ಅಗತ್ಯವಿರುತ್ತದೆ.
ಪ್ರತಿ ವರ್ಷ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಕೆಲವರು ಮಾತ್ರ ಈ ಕಠಿಣವಾದ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡುತ್ತಾರೆ.
#12thfail was an inspiration!
But 12th Pass in flying colors is a sweet memory.
Chanced upon my 12th result and recalled that doing well gives one the insane confidence to dream big!
To all the dear kids who are prepping for #UPSC🇮🇳one of the toughest entrances in the world..… pic.twitter.com/R30mQZpH5u— Smita Sabharwal (@SmitaSabharwal) February 9, 2024
ಎಷ್ಟೋ ಜನ ಪ್ರತಿಭಾವಂತ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಒಂದೆರಡು ಪ್ರಯತ್ನಗಳಲ್ಲಿಯೇ ಪಾಸ್ ಮಾಡುತ್ತಾರೆ. ಹೀಗೆ ಒಬ್ಬ ಪ್ರತಿಭಾವಂತ ಐಎಎಸ್ ಅಧಿಕಾರಿಯೊಬ್ಬರ 12ನೇ ತರಗತಿಯ ಅಂಕಪಟ್ಟಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಈಗ ವೈರಲ್ ಸಹ ಆಗಿದೆ. ಇದನ್ನ ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಕಿರಿಯ ಐಎಎಸ್ ಅಧಿಕಾರಿ
ನಿವೃತ್ತ ಸೇನಾ ಕರ್ನಲ್ ಅವರ ಪುತ್ರಿ ಸ್ಮಿತಾ ಸಬರ್ವಾಲ್ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನವರು. ಸ್ಮಿತಾ ಐಎಎಸ್ ಪ್ರಿಲಿಮಿನರಿ ಪರೀಕ್ಷೆಯಲ್ಲೂ ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್ ಮಾಡಲಾಗಿರಲಿಲ್ಲ. ಆದರೆ 2000ನೇ ಇಸವಿಯಲ್ಲಿ ಅವರ ಎರಡನೇ ಪ್ರಯತ್ನದಲ್ಲಿ, ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ, 4ನೇ ಶ್ರೇಯಾಂಕ ಪಡೆದರು. ಆಗ ಅವರಿಗೆ ಕೇವಲ 23 ವರ್ಷ ವಯಸ್ಸು. ಇದು ಅವರನ್ನ ದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯನ್ನಾಗಿ ಮಾಡಿತ್ತು
12ನೇ ತರಗತಿಯಲ್ಲಿ ಟಾಪ್ ರ್ಯಾಂಕ್
ಸ್ಮಿತಾ ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಆನ್ಸ್ನಲ್ಲಿ ಪಡೆದರು, ನಂತರ ಹೈದರಾಬಾದ್ನ ಸೇಂಟ್ ಫ್ರಾನ್ಸಿಸ್ನಿಂದ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ. ತಮ್ಮ 12ನೇ ತರಗತಿಯಲ್ಲಿ ಅಗ್ರಸ್ಥಾನ ಸಹ ಪಡೆದಿದ್ದರು. ಟ್ವಿಟರ್ನಲ್ಲಿ 4 ಲಕ್ಷಕ್ಕೂ ಹೆಚ್ಚು ಟ್ವಿಟರ್ ಫಾಲೋವರ್ಗಳನ್ನು ಹೊಂದಿರುವ ತಮ್ಮ 12ನೇ ತರಗತಿಯ ಮಾರ್ಕ್ಸ್ ಕಾರ್ಟ್ ಹಂಚಿಕೊಂಡಿದ್ದಾರೆ.
12th ಫೇಲ್ ಸಿನಿಮಾ ಸ್ಪೂರ್ತಿ ಎಂದ ಅಧಿಕಾರಿ
ಇತ್ತೀಚೆಗೆ, ಸ್ಮಿತಾ ಸಬರ್ವಾಲ್ ಅವರು ವಿಕ್ರಾಂತ್ ಮಾಸ್ಸಿ ನಟಿಸಿದ “12th ಫೇಲ್” ಚಲನಚಿತ್ರವನ್ನ ನೋಡಿದ್ದು, ಈ ಸಿನಿಮಾ ಎಲ್ಲರಿಗೂ ಸ್ಪೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 12ನೇ ತರಗತಿಯಲ್ಲಿ ಉತ್ತೀರ್ಣರಾಗುವುದು ಸ್ಮರಣೀಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಅನುಭವವಾಗಿದೆ ಎಂದು ತಮ್ಮ ಅಂಕಪಟ್ಟಿಯನ್ನ ಹಂಚಿಕೊಂಡಿದ್ದಾರೆ.
500ಕ್ಕೆ 469 ಅಂಕ
ಸ್ಮಿತಾ ಅವರ ಅಂಕಪಟ್ಟಿಯ ಪ್ರಕಾರ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು 500ಕ್ಕೆ 469 ಅಂಕ ಪಡೆದಿದ್ದಾರೆ. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ತಲಾ 94, ಎಕನಾಮಿಕ್ಸ್ನಲ್ಲಿ 90, ಸ್ಟ್ರಕ್ಚರ್ ಆಫ್ ಕಾಮರ್ಸ್ನಲ್ಲಿ 86, ಅಕೌಂಟ್ಸ್ನಲ್ಲಿ 97 ಅಂಕ ಪಡೆದಿದ್ದಾರೆ
ಈ ಅಂಕಪಟ್ಟಿಯ ಪ್ರಕಾರ, ಸ್ಮಿತಾ ನಲ್ಲಿ ಉನ್ನತ ಸಾಧನೆ ಮಾಡಿರುವ ವಿದ್ಯಾರ್ಥಿಯಾಗಿದ್ದು, ಸತತವಾಗಿ ಗಮನಾರ್ಹ ಅಂಕಗಳನ್ನು ಗಳಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸಂದೇಶ
ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಸಂದೇಶವನ್ನು ರವಾನಿಸಿದರು. “ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಎಲ್ಲರು ಕಠಿಣ ಶ್ರಮದ ಜೊತೆ, ಸ್ಮಾರ್ಟ್ ವರ್ಕ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಸ್ಮಿತಾ ಸಬರ್ವಾಲ್ ಅವರು ತೆಲಂಗಾಣದ ವಾರಂಗಲ್, ವಿಶಾಖಪಟ್ಟಣಂ, ಕರೀಂನಗರ, ಚಿತ್ತೂರು ಮತ್ತು ಇತರ ಪ್ರದೇಶಗಳಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ.