ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮೊಬೈಲ್ ಫೋನ್ ಕೈಯಲ್ಲಿ ಇರ್ಲೇ ಬೇಕು. ಫೋನ್ ಇಲ್ಲ ಅಂದ್ರೆ ಒಂದು ಕ್ಷಣವೂ ಇರೋಕೆ ಸಾಧ್ಯವೇ ಇಲ್ಲವೆನೋ ಅನ್ನೋ ಅಷ್ಟರ ಮಟ್ಟಿಗೆ ಈ ಜನರೇಷನ್ ಬದಲಾಗಿದೆ. ಕುಂತ್ರು, ನಿಂತ್ರು ಕೈಯಲ್ಲಿ ಸ್ಮಾರ್ಟ್ ಫೋನ್ ಇರ್ಲೇ ಬೇಕು ಅನ್ನೋ ಜಯಮಾನ ಇದು. ಹಾಗಾದ್ರೆ ನಾವು ದಿನಕ್ಕೆ ಎಷ್ಟು ಬಾರಿ ಸ್ಮಾರ್ಟ್ ಫೋನ್ ಬಳಸುತ್ತೇವೆ ಗೊತ್ತಾ?
ಯೆಸ್. ವರದಿಯ ಪ್ರಕಾರ ಭಾರತೀಯ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ಅನ್ನು ದಿನಕ್ಕೆ 70-80 ಬಾರಿ ಯೂಸ್ ಮಾಡುತ್ತಾರೆ. ಅವರಲ್ಲಿ ಅರ್ಧದಷ್ಟು ಜನರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಆಗಾಗ್ಗೆ ಫೋನ್ ತೆಗೆದು ನೋಡು ಅಭ್ಯಾಸವನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿಯ ಪ್ರಕಾರ, 50% ಜನರು ತಮ್ಮ ಫೋನ್ಗಳನ್ನು ಸ್ಪರ್ಶಿಸುವ ಅಭ್ಯಾಸವನ್ನು ಹೊಂದಿದ್ದು, ಅವರು ತಮ್ಮ ಸ್ಮಾರ್ಟ್ಫೋನ್ಗಳನ್ನು ಏಕೆ ತೆರೆಯುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಆದರೆ 45-50% ಜನರು ತಮ್ಮ ಫೋನ್ ಅನ್ನು ಕೆಲವು ಕಾರ್ಯಗಳಿಗಾಗಿ ಮಾತ್ರ ತೆರೆಯುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಮೊಬೈಲ್ ಫೋನ್ ಗಳನ್ನು ಕೇವಲ ಸಂವಹನಕ್ಕೆ ಮಾತ್ರ ಬಳಸಲಾಗುತ್ತಿಲ್ಲ. ಸಾಕಷ್ಟು ವಿಷಯಗಳನ್ನು ತಿಳಿಯಲು, ಮನರಂಜನೆ, ಆನ್ಲೈನ್ ಶಾಪಿಂಗ್, ಗೇಮ್ಸ್,ಆಟಗಳು, ಡಿಜಿಟಲ್ ಪಾವತಿ, ಸುದ್ದಿ, ಶಿಕ್ಷಣ ಮತ್ತು ಇತರ ಹಲವು ಕಾರ್ಯಗಳಿಗು ಮೊಬೈಲ್ ಬಳಸಲಾಗುತ್ತದೆ.