ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚುತ್ತಿರುವ ಜೈಸ್ವಾಲ್ ಸದ್ಯದಲ್ಲೇ ವಿರಾಟ್ ಕೊಹ್ಲಿ (Virat Kohli) ಅವರ ಅಪರೂಪದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ಗಳಿಸಿದ ಟೀಂ ಇಂಡಿಯಾ (Team India) 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿ ಜೈಸ್ವಾಲ್. ಟೆಸ್ಟ್ ಕ್ರಿಕೆಟ್ನ ಸರಣಿಯೊಂದರಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ಗಳ ಪೈಕಿ 774 ರನ್ ಗಳಿಸಿರುವ ಸುನೀಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ 3 ಪಂದ್ಯಗಳಲ್ಲಿ 545 ರನ್ ಗಳಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ಗೆ ಕೊಹ್ಲಿ ದಾಖಲೆ ಮುರಿಯಲು ಇನ್ನೂ 147 ರನ್ಗಳ ಅಗತ್ಯವಿದೆ
ಸದ್ಯ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಆಡಿರುವ 3 ಪಂದ್ಯಗಳಲ್ಲಿ (6 ಇನ್ನಿಂಗ್ಸ್) 109 ಸರಾಸರಿಯಲ್ಲಿ ಒಟ್ಟು 545 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕ, 1 ಅರ್ಧಶತಕ, 50 ಬೌಂಡರಿ, 22 ಸಿಕ್ಸರ್ಗಳೂ ಸೇರಿವೆ.
ಬ್ಯಾಟಿಂಗ್ನಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಸದ್ಯ 2023-25ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಲ್ಲಿ ಟಾಪ್ನಲ್ಲಿದ್ದಾರೆ. ಅತಿಹೆಚ್ಚು ಸ್ಕೋರರ್, ಉತ್ತಮ ಸರಾಸರಿ, ಅತಿಹೆಚ್ಚು ರನ್, ಅತಿಹೆಚ್ಚು ಸ್ಟ್ರೈಕ್ರೇಟ್, ಹೆಚ್ಚು ಬಾರಿ 50+ ರನ್ ಗಳಿಸಿದವರು, ಹೆಚ್ಚು ಬಾರಿ ಶತಕ ಸಿಡಿಸಿದವರು, ಹೆಚ್ಚು ಬೌಂಡರಿ, ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿರುವುದು ವಿಶೇಷ.
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು
* ಸುನೀಲ್ ಗವಾಸ್ಕರ್ – 774 (4 ಪಂದ್ಯ, 8 ಇನ್ನಿಂಗ್ಸ್) – 1970-71 ರಲ್ಲಿ
* ಸುನೀಲ್ ಗವಾಸ್ಕರ್ – 732 (6 ಪಂದ್ಯ, 9 ಇನ್ನಿಂಗ್ಸ್) – 1978/79 ರಲ್ಲಿ
* ವಿರಾಟ್ ಕೊಹ್ಲಿ – 692 – (4 ಪಂದ್ಯ, 8 ಇನ್ನಿಂಗ್ಸ್) – 2014/15 ರಲ್ಲಿ