ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುವ ಸಂಭ್ರಮದಲ್ಲಿರುವ ಅದಿತಿ ಪ್ರಭುದೇವ್ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅದಿತಿಯ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗಿದೆ.
ಹಸಿರು ಬಣ್ಣದ ಸೀರೆಯುಟ್ಟು ನಟಿ ಸಖತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಮುಖದಲ್ಲಿ ತಾಯಿಯಾಗಿರುವ ಸಂಭ್ರಮ ಎದ್ದು ಕಾಣುತ್ತಿದೆ ಮನೆಗೆ ಹೊಸ ಅಥಿತಿಯ ಆಗಮನಕ್ಕೆ ದಂಪತಿ ಸಖತ್ ಖುಷಿಯಾಗಿದ್ದಾರೆ.
2024ರ ಹೊಸ ವರ್ಷದ ದಿನ ದಿನ ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ರು. ಇದೀಗ ನಟಿ ಅದಿತಿ ಪ್ರಭುದೇವ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಮಾಡಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಶ್ರೀಮಂತ ಶಾಸ್ತ್ರಕ್ಕೆ ಅನೇಕ ಸ್ಯಾಂಡಲ್ವುಡ್ ನಟ-ನಟಿಯರು ಕೂಡ ಆಗಮಿಸಿದ್ರು. ನಟ ಶರಣ್ ಕೂಡ ಕಾರ್ಯಕ್ರಮಕ್ಕೆ ಬಂದು ಅದಿತಿಗೆ ಶುಭ ಹಾರೈಸಿದರು.
ಬೆಂಗಳೂರಿನ ಅದಿತಿ ಅವರ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಅದಿತಿ ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.