ದೀರ್ಘಕಾಲ ಕುಳಿತುಕೊಳ್ಳುವುದು, ವಿಶೇಷವಾಗಿ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು, ದೈಹಿಕ ನಿಷ್ಕ್ರಿಯತೆ ಇವೆಲ್ಲವೂ ಬೆನ್ನು ನೋವಿಗೆ ಕಾರಣವಾಗಬಹುದು.
ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಎದ್ದೇಳುವುದು ಮತ್ತು ಕುಳಿತುಕೊಳ್ಳುವುದು ಸೇರಿದಂತೆ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಸಹ ಕಷ್ಟವಾಗುತ್ತದೆ. ಒಂದು ವೇಳೆ ಈ ಸಮಸ್ಯೆಯಿಂದ ಪರಿಹಾರ ಪಡೆಯಬೇಕು ಎಂದು ಅಂದುಕೊಂಡಿದ್ದರೆ, ನಾವಿಂದು ಕೆಲ ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
ಹೀಟಿಂಗ್ ಪ್ಯಾಡ್:
ಹೀಟಿಂಗ್ ಪ್ಯಾಡ್ ಅನ್ನು ಬಳಸುವುದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಟಿಂಗ್ ಪ್ಯಾಡ್ ಅನ್ನು ಸೊಂಟದ ಮೇಲೆ ಇರಿಸಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಸ್ನಾಯುಗಳು ರಿಲೀಫ್ ಪಡೆಯುತ್ತವೆ. ಇದು ಚಳಿಗಾಲದಲ್ಲಿ ಅಥವಾ ಸ್ನಾಯುಗಳಲ್ಲಿನ ಸಂಧಿವಾತಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಹರ್ಬಲ್ ಟೀ
ಹರ್ಬಲ್ ಟೀ ಬೆನ್ನು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಶುಂಠಿ, ನಿಂಬೆ ಮತ್ತು ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ತುಂಬಾ ಒಳ್ಳೆಯದು.
ಆಯುರ್ವೇದ ಚಿಕಿತ್ಸೆ
ಬೆನ್ನು ನೋವನ್ನು ಕಡಿಮೆ ಮಾಡಲು ಆಯುರ್ವೇದ ಔಷಧಿಗಳನ್ನು ಸಹ ಬಳಸಬಹುದು. ಉದಾಹರಣೆಗೆ ಆಯುರ್ವೇದ ತೈಲಗಳಿಂದ ಮಸಾಜ್ ಮಾಡುವುದು. ಈ ಪರಿಹಾರಗಳು ನೈಸರ್ಗಿಕ ರೀತಿಯಲ್ಲಿ ಬೆನ್ನು ನೋವನ್ನು ಗುಣಪಡಿಸಬಹುದು.
ಸುಲಭ ವ್ಯಾಯಾಮ
ಕೆಲವು ಸರಳ ವ್ಯಾಯಾಮಗಳು ಬೆನ್ನುನೋವಿಗೆ ತುಂಬಾ ಸಹಾಯಕವಾಗಬಹುದು. ಬೆನ್ನು ಮತ್ತು ಸೊಂಟವನ್ನು ಹಿಗ್ಗಿಸುವ ಯೋಗಾಸನಗಳು ನಿಮ್ಮ ಬೆನ್ನನ್ನು ಬಲಪಡಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.