ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಜ್ಯೋತಿ ರೈ ಸದ್ಯ ಪರಭಾಷೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನೆಯ ಮೂಲಕವೇ ಆಫರ್ ಗಿಟ್ಟಿಸಿಕೊಂಡ ಚೆಲುವೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ.
ಇತ್ತೀಚೆಗೆ ಜ್ಯೋತಿರೈ ಸಾಮಾಜಿಕ ಜಾಲಾ ತಾಣದಲ್ಲಿ ತಮ್ಮ 2ನೇ ಮದುವೆ ವಿಚಾರ ರಿವೀಲ್ ಮಾಡಿದ್ದರು. ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಮದುವೆ ಆಗಿರುವ ವಿಚಾರವನ್ನು ನಟಿ ಬಹಿರಂಗಪಡಿಸಿದ್ದರು. ಈ ಮಧ್ಯೆ ನಟಿ ಮತ್ತಷ್ಟು ಹಾಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.
ಜ್ಯೋತಿ ರೈ ಇನ್ಸ್ಟಾಗ್ರಾಮ್ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ನಟಿಯ ಫೋಟೋಗೆ ಸಖತ್ ಲೈಕ್ ಕಾಮೆಂಟ್ ಬರುತ್ತಿದೆ. ಒಂದು ಮಗುವಿನ ತಾಯಿ ಆಗಿದ್ದರೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.
ವಯಸ್ಸು 38 ಆಗಿದ್ದರೂ ಇಪ್ಪತ್ತರ ಹುಡುಗಿಯರನ್ನು ನಾಚಿಸುವಂತೆ ಕ್ಯಾಮರಾ ಮುಂದೆ ಜ್ಯೋತಿ ರೈ ಕಾಣಿಸಿಕೊಳ್ಳುತ್ತಾರೆ. ಸಣ್ಣ ಫ್ರಾಕ್, ಟಾಪ್ ಧರಿಸಿ ಹೊಸ ಫೋಟೊಗಳನ್ನು ಇದೀಗ ಹಂಚಿಕೊಂಡಿದ್ದಾರೆ. ಜ್ಯೋತಿ ರೈ ಅವರ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.