ಟಾಲಿವುಡ್ ಬ್ಯೂಟಿ, ಕರಾವಳಿ ಸುಂದರಿ ಪೂಜಾ ಹೆಗ್ಡೆ ಇತ್ತೀಚೆಗೆ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ.
ಪೂಜಾ ನಟನೆಯ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಬಾಲಿವುಡ್ ಗೆ ಎಂಟ್ರಿಕೊಟ್ಟರು ಅಲ್ಲೂ ಸೈ ಎನಿಸಿಕೊಳ್ಳಲಿಲ್ಲ.
ಪೂಜಾ ಸಿನಿಮಾಗಳು ಸದ್ದು ಮಾಡದೇ ಹೋದ್ರು ಆಕೆಗೆ ಬರ್ತಿರೋ ಆಫರ್ ಗಳು ಮಾತ್ರ ಕೊಂಚವೂ ಕಮ್ಮಿಯಾಗುತ್ತಿಲ್ಲ.
ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ಪೂಜಾ ಮದುವೆಯ ಸುದ್ದಿಗಳು ಹರಿದಾಡುತ್ತಿದೆ.
ಇದೀಗ ನಟಿ ಸುಂದರವಾದ ಹಳದಿ ಬಣ್ಣದ ಸೀರೆ ಉಟ್ಟು, ಮಂಗಳೂರು ಮಲ್ಲಿಗ ಮುಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆಕರ್ಷಕವಾದ ಬ್ಲೌಸ್, ಸೀರೆ ಉಟ್ಟು ಆಭರಣಗಳನ್ನು ಧರಿಸಿಕೊಂಡು ಪಕ್ಕಾ ಮಂಗಳೂರಿನ ಚೆಲುವೆಯಾಗಿ ಮಿಂಚುತ್ತಿದ್ದಾರೆ.
ಪೂಜಾ ಹೆಗ್ಡೆ ಹಳದಿ ಬಣ್ಣದ ಸೀರೆಗೆ ಹಸಿರು ಸ್ಟೋನ್ ಇರುವಂತಹ ಆಕರ್ಷಕವಾದ ಆಭರಣಗಳನ್ನು ಧರಿಸಿದ್ದರು.
ನಟಿ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಮಲ್ಲಿಗೆ ಎಂದರೆ ಭಾರೀ ಇಷ್ಟ. ನಟಿ ಈ ಹಿಂದೆಯೂ ಹಲವಾರು ಸಲ ಮಂಗಳೂರು ಮಲ್ಲಿಗೆ ಮುಡಿದು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಮಂಗಳೂರು ಮಲ್ಲಿಗೆ ಪೂಜಾ ಮುಡಿಗೇರಿದೆ.