ಸ್ಮಾರ್ಟ್ ಫೋನ್ ಗಳು ನಿತ್ಯ ಒಂದೊಂದು ರೀತಿಯಲ್ಲಿ ಮಾರುಕಟ್ಟೆಗೆ ಪರಿಚಯವಾಗುತ್ತವೆ. ಇವತ್ತು ಬಿಡುಗಡೆಯಾದ ಫೋನ್ ಇನ್ನೂ ಕೆಲವೇ ದಿನಗಳಲ್ಲಿ ಮತ್ತಷ್ಟು ವಿನ್ಯಾಸ ಹೊಸ ಪೀಚರ್ಸ್ ನಲ್ಲಿ ಮಾರುಕಟ್ಟೆಗೆ ಬರುತ್ತವೆ. ಇದೀಗ ಐಫೋನ್ ಕೂಡ ಹೊಸ ವಿನ್ಯಾಸದಲ್ಲಿ ಜನರ ಕೈಗೆಟುಕಲಿದೆ.
ಪ್ರಸ್ತುತ, ಮಾರುಕಟ್ಟೆಯಲ್ಲಿ ಮಡಚಬಹುದಾದ ಸ್ಮಾರ್ಟ್ಫೋನ್ಗಳ ಇದೀಗ ಖ್ಯಾತ ಸ್ಮಾರ್ಟ್ ಫೋನ್ ದೈತ್ಯ ಆ್ಯಪಲ್ ಕೂಡ ಈ ಕ್ಷೇತ್ರಕ್ಕೆ ಕಾಲಿಡಲಿದೆಯಂತೆ. ಸದ್ಯದಲ್ಲೇ ಆ್ಯಪಲ್ ನಿಂದ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.
ಫೋಲ್ಡಬಲ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬಂದಾಗಿನಿಂದ ಆ್ಯಪಲ್ ಫೋನ್ಗಳ ಮಾರಾಟವು ಕಡಿಮೆಯಾಗುತ್ತಿದೆ. ಅದರಲ್ಲೂ ಚೀನಾದ ಮಾರುಕಟ್ಟೆಯಲ್ಲಿ ಹುವಾವೆಯ ಫೋಲ್ಡಬಲ್ ಫೋನ್ಗಳಿಂದಾಗಿ ಆ್ಯಪಲ್ ಫೋನುಗಳಿಗೆ ಬೇಡಿಕೆ ಕಮ್ಮಿ ಆಗಿದೆಯಂತೆ. ಈ ಹಿನ್ನೆಲೆಯಲ್ಲಿ ಇದೀಗ ಆ್ಯಪಲ್ ಸಂಸ್ಥೆ ಕೂಡ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಇತರ ಕಂಪನಿಗಳಿಂದ ಬರುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ಆ್ಯಪಲ್ ಕೂಡ ಫೋಲ್ಡಬಲ್ ಫೋನ್ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಆ್ಯಪಲ್ ಫೋಲ್ಡಬಲ್ ಫೋನ್ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂಧು ಮೂಲಗಳು ಹೇಳಿವೆ. ಆದರೆ ಆ್ಯಪಲ್ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಆ್ಯಪಲ್ 7.6 ರಿಂದ 8.4 ಇಂಚುಗಳ ನಡುವಿನ ದೊಡ್ಡ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ ಅನ್ನು ತಯಾರಿಸುತ್ತಿದೆಯಂತೆ. ದಿ ಎಲೆಕ್ನ ವರದಿಯ ಪ್ರಕಾರ, ಆ್ಯಪಲ್ನಿಂದ ಮೊದಲ ಮಡಚಬಹುದಾದ ಸ್ಮಾರ್ಟ್ಫೋನ್ 2026 ಅಥವಾ 2027 ರ ವೇಳೆಗೆ ಕೈಗೆ ಸಿಗಲಿದೆ.