ಫೆ.8ರಂದು ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಈ ಬೆನ್ನಲ್ಲೇ ಚುನಾವಣೆಯ ಫಲಿತಾಂಶಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ರಾವಲ್ಪಿಂಡಿ ಕಮಿಷನರ್ ಲಿಯಾಖತ್ ಅಲಿ ಚಟ್ಟಾ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
“ನಾವು ಸೋತವರನ್ನು 50,000 ಮತಗಳ ಅಂತರದಿಂದ ವಿಜೇತರನ್ನಾಗಿ ಪರಿವರ್ತಿಸುತ್ತೇವೆ. ನಾನು ರಾವಲ್ಪಿಂಡಿ ವಿಭಾಗದ ಜನರಿಗೆ ಅನ್ಯಾಯ ಮಾಡಿದ್ದೇನೆ ಎಂದು ಚಟ್ಟಾ ಪೊಲೀಸರಿಗೆ ಶರಣಾಗಿದ್ದಾರೆ. ಒತ್ತಡಕ್ಕೆ ಒಳಗಾಗಬೇಕಾಗಿ ಬಂತು ಎಂದು ರಾವಲ್ಪಿಂಡಿ ಕಮಿಷನರ್ ಹೇಳಿದ್ದಾರೆ.
ನನ್ನ ವಿಭಾಗದ ಚುನಾವಣಾಧಿಕಾರಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಈ ಎಲ್ಲಾ ರಾಜಕಾರಣಿಗಳು ಯಾವುದೇ ತಪ್ಪು ಮಾಡಬಾರದು ಎಂದು ಇಡೀ ಅಧಿಕಾರಿಗಳಲ್ಲಿ ನನ್ನ ವಿನಂತಿಯಾಗಿದೆ ಎಂದು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾತನಾಡಿದ ಚಟ್ಟಾ ಹೇಳಿದ್ದಾರೆ.