ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ಗೆ ಶಾಕ್ ಸರಣಿ ಮುಂದುವರಿದಿದೆ. ಒಂದೆಡೆ ಐ.ಎನ್.ಡಿ.ಐ.ಎ ಒಕ್ಕೂಟದಿಂದ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಿದ್ದರೆ, ಮತ್ತೊಂದೆಡೆ ದಶಕಗಳ ಕಾಲ ಅಧಿಕಾರ ಅನುಭವಿಸಿದ ನಾಯಕರು ಗುಡ್ಬೈ ಹೇಳ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಬಳಿಕ ಮಧ್ಯಪ್ರದೇಶದಲ್ಲಿ ಶಾಕ್ ಎದುರಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ 3ನೇ ಮಗ ಎಂದೇ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರ ಸಚಿವ, ಮಧ್ಯಪ್ರದೇಶ ಸಿಎಂ ಆಗಿದ್ದ ಕಮಲ್ ನಾಥ್ ಇದೀಗ ಬಿಜೆಪಿಗೆ ಜಂಪ್ ಆಗುತ್ತಾರೆ ಎನ್ನಲಾಗುತ್ತಿದೆ.
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?
ಛಿಂದ್ವಾರ ಸಂಸದ, ಪುತ್ರ ನಕುಲ್ನಾಥ್ ಜೊತೆ ಸೇರಿ ಕಮಲ್ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಫೆ.22ಕ್ಕೆ ಮಧ್ಯಪ್ರದೇಶ ಪ್ರವೇಶವಾಗುವ ಹೊತ್ತಲ್ಲೇ ಈ ವಿಚಾರ ಕೇಳಿಬಂದಿದೆ.
ಆದರೆ ಈ ವದಂತಿಗಳನ್ನು ಕಮಲ್ನಾಥ್ ಅಲ್ಲಗಳೆದಿದ್ದಾರೆ. ಪಕ್ಷಕ್ಕೆ ಯಾವುದೇ ರಾಜೀನಾಮೆ ಕೊಟ್ಟಿಲ್ಲ. ಆದರೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬೇಸರವಾಗಿದೆ. ಐದು ದಶಕಗಳ ಹಿಂದೆ ಇದ್ದ ಸಂಘಟನೆ ಈಗ ಇಲ್ಲ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾನು ಬಿಜೆಪಿ ಸೇರೋದಾರೆ ಎಲ್ಲರಿಗೂ ತಿಳಿಸಿಯೇ ಸೇರ್ಪಡೆ ಆಗ್ತೇನೆ ಎಂದಿದ್ದಾರೆ. ಇತ್ತ, ಕಮಲನಾಥ್ ಕಾಂಗ್ರೆಸ್ ತೊರೆಯಲ್ಲ. ನಾನು ಅವರ ಜೊತೆ ಮಾತಾಡಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.