ಕಲಬುರಗಿ: ಕಲಬುರಗಿ ನೂತನ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಹಾಕೈ ಅಧಿಕಾರ ವಹಿಸಿಕೊಂಡಿದ್ದಾರೆ..ಲೋಕಸಭಾ ಚುನಾವಣೆ ಹಿನ್ನಲೆ ಅಡ್ಡೂರು ಶ್ರೀನಿವಾಸಲು ಡೆಪ್ಯೂಟಿ ಕಮಾಂಡೆಂಟ್ ಆಗಿ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ.
ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಅಕ್ಷಯ್ ಹಾಕೈ ಯನ್ನ ಕಲಬುರಗಿ SP ಆಗಿ ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ..ಈ ಹಿನ್ನಲೆ ಇಂದು ಕಲಬುರಗಿಯ ಪೋಲೀಸ್ ಭವನದಲ್ಲಿ ಅಕ್ಷಯ್ ಹಾಕೈ SP ಆಗಿ ಅಧಿಕಾರ ಸ್ವೀಕಾರ ಮಾಡಿದ್ರು.