ಚೆನ್ನೈ:- ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ ಘಟನೆ ವಿರುದುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಜರುಗಿದೆ.
ಪ್ರಾಥಮಿಕ ತನಿಖೆ ಉಲ್ಲೇಖಿಸಿ, ಮೃತರಲ್ಲಿ ಮಹಿಳೆಯರೂ ಸೇರಿದ್ದಾರೆ. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. ದುರಂತದಲ್ಲಿ ಸ್ಥಳದಲ್ಲೇ 8 ಮಂದಿ ಸಾವಿಗೀಡಾಗಿದ್ದಾರೆ
ವಿರುದನಗರದ ವೆಂಬಕೋಟೈ ಬಳಿಯ ಮತ್ತುಚಾಮಿ ಪುರಂನಲ್ಲಿ ಘಟನೆ ನಡೆದಿದ್ದು, ಮೃತರು ಅಂಬಿಕಾ, ಮುರುಗ, ಜ್ಯೋತಿ, ಮುತ್ತು ಸೇರಿ ಹತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿಘ್ನೇಶ್ ಎಂಬವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದೆ.
ಗಂಭೀರ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲೂ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೆಂಬಕೊಟ್ಟೈ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ