ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಕೈಲಿರೋ ಫೋನ್ ಬೇಸರವಾಗಿ ಹೊಸ ಹೊಸ ಫೀಚರ್ ಗಳು ಬಂದಾಗ ಆ ಮೊಬೈಲ್ ಗಳು ಕೊಳ್ಳಬೇಕು ಅನಿಸುತ್ತೆ. ಆದರೆ ಕೈಲಿರೋ ಮೊಬೈಲ್ ಏನ್ ಮಾಡೋದಪ್ಪ ಅನಿಸುತ್ತೆ. ಅದಕ್ಕೆ ಇದೀಗ ಒನ್ಪ್ಲಸ್ನ ಹೊಸ ಸ್ಮಾರ್ಟ್ಫೋನ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲಾಗಿದೆ.
ಯೆಸ್. ನೀವೇನಾದ್ರು 256GB ಇಂಟರ್ ಸ್ಟೋರೇಜ್ ಆಯ್ಕೆಯ ಈ ಒನ್ಪ್ಲಸ್ ಫೋನ್ ಖರೀದಿ ಮಾಡಿದ್ದು, ಈ ವಿಷಯದಲ್ಲಿ ನಿಮಗೆ ಇಷ್ಟ ಇಲ್ಲ ಎನಿಸಿದ್ರೆ ನಿಮ್ಮ ಹಣವನ್ನು ಹಿಂತಿರುಗಿಸಲು ಒನ್ಪ್ಲಸ್ ಮುಂದಾಗಿದೆ
ಒನ್ಪ್ಲಸ್ 12 ಜೊತೆಗೆ ಕಳೆದ ತಿಂಗಳು ಬಿಡುಗಡೆಯಾದ ಹೊಸ ಒನ್ಪ್ಲಸ್ 12R ಈಗ ಮತ್ತೇ ಮುನ್ನೆಲೆಗೆ ಬಂದಿದೆ. ಕಾರಣ ಅದರ 256GB ವೇರಿಯಂಟ್. ಈ ಮೂಲಕ ಯಾರೆಲ್ಲಾ 256GB ವೇರಿಯಂಟ್ ಫೋನ್ ಅನ್ನು ಖರೀದಿ ಮಾಡುತ್ತಾರೋ ಅವರ ಹಣವನ್ನು ಹಿಂತಿರುಗಿಸಲು ಕಂಪೆನಿ ಮುಂದಾಗಿದೆ.
ಒನ್ಪ್ಲಸ್ 12R ಫೋನ್ ಅನ್ನು ಲಾಂಚ್ ಮಾಡುವಾಗ, ಕಂಪೆನಿಯು UFS 4.0 ಸ್ಟೋರೇಜ್ ಪ್ರಕಾರವನ್ನು ನೀಡಲಾಗುತ್ತದೆ ಎಂದು ಹೇಳಿತ್ತು. ಹಾಗೆಯೇ UFS 3.1 ಶೇಖರಣಾ ಪ್ರಕಾರವು ಮೂಲ ವೇರಿಯಂಟ್ನಲ್ಲಿ ಲಭ್ಯ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ, ಈಗ ಕಂಪನಿಯು ಹೈಎಂಡ್ ವೇರಿಯಂಟ್ ಅನ್ನು UFS 3.1 ಸ್ಟೋರೇಜ್ ಪ್ರಕಾರದಲ್ಲೇ ನೀಡುವ ಬಗ್ಗೆ ಮಾಹಿತಿ ನೀಡಿದೆ. ಪರಿಣಾಮ ಯಾರೆಲ್ಲಾ ಬಳಕೆದಾರರು ಈ ಫೋನ್ ಅನ್ನು ಹಿಂತಿರುಗಿಸಲು ಬಯಸಿದರೆ, ಅವರಿಗೆ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಮಾಹಿತಿಯನ್ನು ಕಂಪನಿಯು ಬ್ಲಾಗ್ ಪೋಸ್ಟ್ನಲ್ಲಿ ಉಲ್ಲೇಖಿಸಿದೆ. ಆದ್ದರಿಂದ ನೀವು ಈ ಒನ್ಪ್ಲಸ್ ಫೋನ್ನ 256 GB ವೇರಿಯಂಟ್ ಅನ್ನು ಖರೀದಿ ಮಾಡಿ ನಿಮಗೆ ಅದನ್ನು ಬಳಕೆ ಮಾಡಲು ಇಷ್ಟ ಇಲ್ಲ ಎಂದಾದರೆ ಅದನ್ನು ವಾಪಸ್ ಮಾಡಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ. ಹಾಗೆಯೇ ಒನ್ಪ್ಲಸ್ 12R ನಲ್ಲಿ ಪೂರ್ಣ ಮರುಪಾವತಿಯನ್ನು ಪಡೆಯಲು ಕಂಪನಿಯು ಮಾರ್ಚ್ 16 ರ ಗಡುವನ್ನು ನಿಗದಿಪಡಿಸಿದೆ.
ಒನ್ಪ್ಲಸ್ನ ಮುಖ್ಯಸ್ಥ ಕಿಂಡರ್ ಲಿಯು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಒನ್ಪ್ಲಸ್ 12R ನ 256GB ವೇರಿಯಂಟ್ ಖರೀದಿಸಿದ್ದರೆ ಮತ್ತು ಅದರ ಫೈಲ್ ಸಿಸ್ಟಮ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು. ಅವರು ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತಾರೆ ಮತ್ತು ಮರುಪಾವತಿಯನ್ನು ಸಹ ನೀಡಲಾಗುತ್ತದೆ. ಇದು 16 ಮಾರ್ಚ್ 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.