ರಾಜ್ಕೋಟ್: ಸ್ಪಿನ್ನರ್ ಆರ್ ಅಶ್ವಿನ್ ( R Ashwin) ಈಗ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಿಂದ (Test Match) ದಿಢೀರ್ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಭಾರತ (Team India) ಪಂದ್ಯ ಆಡುತ್ತಿದೆ.
ಭಾರತದಲ್ಲೇ ಈ ಬಾರೀ IPL : ಊಹಾಪೋಹಗಳಿಗೆ ತೆರೆ ಎಳೆದ ಮುಖ್ಯಸ್ಥ ಅರುಣ್ ಧುಮಾಲ್
ಅಶ್ವಿನ್ ಬದಲು ಫೀಲ್ಡಿಂಗ್ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಆಡಿಸಲು ಅವಕಾಶವಿದೆ. ಇಂಗ್ಲೆಂಡ್ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ ಬಿಸಿಸಿಐ (BCCI) ಹೇಳಿಕೆ ನೀಡಿದೆ
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕಾರಣ ತಿಳಿಸಿದ್ದಾರೆ. ಅಶ್ವಿನ್ ಅವರ ತಾಯಿ (Mother) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್ಕೋಟ್ ತೊರೆದು ಶೀಘ್ರವೇ ತಾಯಿಯನ್ನು ನೋಡಲು ಚೆನ್ನೈಗೆ ತೆರಳಬೇಕು ಎಂದು ಹೇಳಿದ್ದಾರೆ.