ಕಲಬುರಗಿ: ಗಾಡಿ ಡಿಕ್ಕಿಯಲ್ಲಿಟ್ಟಿದ್ದ 2 ಲಕ್ಷ ರೂಪಾಯಿ ಎರಡೇ ನಿಮಿಷದಲ್ಲಿ ಕಳ್ಳನ ಪಾಲಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.ನಗರದ ಚೌಕ್ ಠಾಣಾ ವ್ಯಾಪ್ತಿಯ ಸೂಪರ್ ಮಾರ್ಕೆಟ್ ದಲ್ಲಿ ಘಟನೆ ನಡೆದಿದ್ದು ಚಾಲಕಿ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ..ಕಿರಾಣಿ ಅಂಗಡಿಯ ಮಾಲೀಕ ನಿತಿನ್ ಬಾವಗೆ ಎಂಬುವವರು ಹಣ ಕಳೆದುಕೊಂಡು ಇದೀಗ ದೂರು ನೀಡಿದ್ದಾರೆ.
ಅಂಗಡಿ ಬಂದ್ ಮಾಡಿ ಮನೆಗೆ ಹೋಗುವಾಗ ಗಾಡಿ ಡಿಕ್ಕಿಯಲ್ಲಿ ಹಣ ಇಟ್ಟು ಎದುರಿನ ರಸ್ತೆಯಲ್ಲಿ ನಿಂತಿದ್ದ ಸ್ನೇಹಿತನ ಜೊತೆ ಮಾತಾಡಿ ಬರೋಷ್ಟರಲ್ಲಿ ಕೃತ್ಯ ನಡೆದಿದೆ..