ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ (Ashwin) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಭಾರತದಲ್ಲೇ ಈ ಬಾರೀ IPL : ಊಹಾಪೋಹಗಳಿಗೆ ತೆರೆ ಎಳೆದ ಮುಖ್ಯಸ್ಥ ಅರುಣ್ ಧುಮಾಲ್
ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡದ ಝಾಕ್ ಕ್ರಾವ್ಲಿ (Zak Crawley) ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) 500 ವಿಕೆಟ್ ಪಡೆದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ದಿಗ್ಗಜರ ಎಲೈಟ್ ಲಿಸ್ಟ್ ಸೇರಿದ ಸ್ಪಿನ್ ಮಾಂತ್ರಿಕ:
ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಆಟಗಾರರ ಪೈಕಿ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ 800 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಶೇನ್ ವಾರ್ನೆ (708 ವಿಕೆಟ್), ಜೇಮ್ಸ್ ಆಂಡರ್ಸನ್ (696 ವಿಕೆಟ್), ಅನಿಲ್ ಕುಂಬ್ಳೆ (619 ವಿಕೆಟ್), ಸ್ಟುವರ್ಡ್ ಬ್ರಾಡ್ (604 ವಿಕೆಟ್), ಗ್ಲೆನ್ ಮೆಕ್ಗ್ರಾತ್ (563 ವಿಕೆಟ್), ಕರ್ಟ್ನಿ ವಾಲ್ಷ್ (519 ವಿಕೆಟ್), ನಥಾನ್ ಲಿಯೊನ್ (517 ವಿಕೆಟ್) ಪಡೆದು ಕ್ರಮವಾಗಿ ಮೊದಲ 8 ಸ್ಥಾನಗಳಲ್ಲಿದ್ದರೆ, 500 ವಿಕೆಟ್ ಪೂರೈಸಿದ ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ. ಇನ್ನೂ ಡೇಲ್ಸ್ಟೇನ್ 439 ವಿಕೆಟ್ ಪಡೆದು 10ನೇ ಸ್ಥಾನದಲ್ಲಿದ್ದಾರೆ