ಕಲಬುರ್ಗಿ:– ಬೆಂಗಳೂರಿಗೆ ಹೋಗಿ ಬರಲುರಾತ್ರಿ ವಿಮಾನ ಸೇವೆ ಶುರುವಾಗಬೇಕು ಅನ್ನೋ ಕಲಬುರಗಿ ಜನರ ಬಹುದಿನದ ಕನಸು ಕೊನೆಗೂ ನನಸಾಗಿದೆ.
ಅಂದಹಾಗೆ Alliance Airlines ವಿಮಾನ ಹಾರಾಟ ನಡೆಸಲು ಮುಂದೆ ಬಂದಿದ್ದು ಫೆಬ್ರವರಿ 22 ರಂದು ಸಂಜೆ 6:45 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 08:00 ಗಂಟೆಗೆ ಕಲಬುರಗಿಗೆ ಬರಲಿದೆ ಮತ್ತು ಇದೇ ವಿಮಾನ ರಾತ್ರಿ 8:45 ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 10:00 ತಲುಪಲಿದೆ.
ಸದ್ಯಕ್ಕೆ ಈ ವಿಮಾನ ಪ್ರತಿ ಗುರುವಾರ ಸಂಚರಿಸಲಿದ್ದು ಮುಂಬರುವ ದಿನಗಳಲ್ಲಿ ಪ್ರತಿದಿನ ಸೇವೆ ಪ್ರಾರಂಭವಾಗಲಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಸಂಸದ ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ…