ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಪಾಲಕ್ಕಾಡ್ ಸಂಶೋಧಕರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ.
ವಿಶ್ವಾದ್ಯಂತ ಇಂಧನ ಹೆಚ್ಚುತ್ತಿರುವ ಬೇಡಿಕೆಗೆ ಉತ್ತವಾಗಿ ಐಐಟಿ ತಂಡ ಈ ಹೊಸ ಆವಿಷ್ಕಾರವನ್ನು ಕಂಡು ಹಿಡಿದಿದೆ. ಇದರ ಭಾಗವಾಗಿ, ಎಲೆಕ್ಟ್ರೋಕೆಮಿಕಲ್ ರಿಸೋರ್ಸ್ ರಿಕವರಿ ರಿಯಾಕ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಧಾನದಲ್ಲಿ ವಿದ್ಯುತ್ ಜೊತೆಗೆ ಜೈವಿಕ ಗೊಬ್ಬರವನ್ನು ಉತ್ಪಾದಿಸಲಿದೆ.
ಈ ಹೊಸ ತಂತ್ರಜ್ಞಾನದೊಂದಿಗೆ ಮೂತ್ರದ ಅಯಾನಿಕ್ ಬಲವನ್ನು ಬಳಸಲಾಗುತ್ತದೆ. ವಿದ್ಯುತ್ ಉತ್ಪಾದಿಸಲು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಸಾರಜನಕ, ರಂಜಕ ಮತ್ತು ಮೆಗ್ನೀಸಿಯಮ್ ಜೈವಿಕ ಗೊಬ್ಬರವನ್ನು ತಯಾರಿಸಲು ಉಪಯುಕ್ತವಾಗಿದೆ. ಈ ಸಂಯೋಜಿತ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ರಿಯಾಕ್ಟರ್, ಅಮೋನಿಯಾ ಆಡ್ಸೋರ್ಪ್ಶನ್ ಕಾಲಮ್, ಡಿಕಲೋರೈಸೇಶನ್, ಕ್ಲೋರಿನೇಶನ್ ಚೇಂಬರ್, ಪ್ಲಂಬಿಂಗ್, ಎಲೆಕ್ಟ್ರಿಕಲ್ ಮ್ಯಾನಿಫೋಲ್ಡ್ಗಳನ್ನು ಒಳಗೊಂಡಿದೆ.
ಮೂತ್ರವನ್ನು ಇಆರ್ ಆರ್ ಗೆ ನೀಡಲಾಗುತ್ತದೆ ಇವು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಅದು ಏಕಕಾಲದಲ್ಲಿ ವಿದ್ಯುತ್ ಮತ್ತು ಜೈವಿಕ ಗೊಬ್ಬರವನ್ನು ಉತ್ಪಾದಿಸುತ್ತದೆ. ಇದರಿಂದ ವಿದ್ಯುತ್ ಜತೆಗೆ ಜೈವಿಕ ಗೊಬ್ಬರ ಉತ್ಪಾದನೆಯಾಗುತ್ತದೆ. ಇದು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ.
ಇಆರ್ ಆರ್ ನಲ್ಲಿ, ಮೆಗ್ನೀಸಿಯಮ್ ಆನೋಡ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗಾಳಿಯಲ್ಲಿ ಕಾರ್ಬನ್ ಕ್ಯಾಥೋಡ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಸಂಯೋಜಿತ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸಲು ಮೂತ್ರದಲ್ಲಿನ ಅಯಾನಿಕ್ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಉಪಯೋಗಿಸಿಕೊಂಡು ಮೊಬೈಲ್ ಫೋನ್ ಮತ್ತು ಲೈಟ್ ಎಲ್ಇಡಿ ಬಲ್ಬ್ಗಳನ್ನು ಚಾರ್ಜ್ ಮಾಡಬಹುದಾಗಿದೆ.