ಚಾಮರಾಜನಗರ: ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ವೈರಲ್ ಟಿಕ್ ಟಾಕ್ ಗೆ ನೊಂದ ಪತಿಯೊಬ್ಬ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದದ್ದು ಗುರುವಾರ ಬೆಳ್ಳಿಗ್ಗೆ 11ಮಾಹಿತಿ ಲಭ್ಯವಾಗಿದೆ
ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಮೃತ ದುರ್ದೈವಿ. ಮೃತ ಕುಮಾರ್ ನ ಸೋದರ ಮಹಾದೇವಸ್ವಾಮಿ ಮೃತ ಕುಮಾರ್ ಪತ್ನಿ ರೂಪಾ, ರೂಪಾಳ ಸೋದರ ಮಾವ ಗೋವಿಂದ ವಿರುದ್ಧ ದೂರು ಕೊಟ್ಟು ಆಗ್ರಹಿಸಿದ್ದಾರೆ. ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಬೆಲ್ಲ ಬೆರೆಸಿದ ಜೀರಿಗೆ ನೀರು ಕುಡಿಯುವುದರಿಂದ ಆಗುವ ಪ್ರಯೋಜಗಳೇನು ಗೊತ್ತಾ..?
ಸ್ನೇಹಿತರು ಕುಮಾರ್ ನ ಗಮನಕ್ಕೆ ತಂದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮನನೊಂದ ಪತಿ ಕುಮಾರ್ ಮನೆ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹನೂರು ಆಸ್ಪತ್ರೆಗೆ ಶವವನ್ನು ರವಾನೆ ಮಾಡಲಾಗಿದೆ.