ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳಿ ಸಿಕ್ಕಿ ಬಿದ್ದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬ್ಯಾನ್ ಶಿಕ್ಷೆ ವಿಧಿಸಿದೆ.
ಹ್ಯಾರಿಸ್ ರೌಫ್ ಖಾತ್ರಿ ಪಡಿಸಿಯೂ, ಅಂತಿಮ ಗಳಿಗೆಯಲ್ಲಿ ಫಿಟ್ನೆಸ್ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದರು ಎಂದು ಆ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚೀಫ್ ಸೆಲೆಕ್ಟರ್ ಹ್ಯಾರಿಸ್ ರೌಫ್ ಹೇಳಿದ್ದರು. ಆದರೆ, ಬಳಿಕ ನಡೆಸಲಾದ ವೈದ್ಯಕೀಯ ತಪಾಸಣೆಯಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ಬೆಳಕಿಗೆ ಬಂದಿಲ್ಲ. ಈ ಮೂಲಕ ಸುಳ್ಳು ಹೇಳಿ ಆಸ್ಟ್ರೇಲಿಯಾ ಪ್ರವಾಸ ತಪ್ಪಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪಿಸಿಬಿ ಕಠಿಣ ಕ್ರಮ ಕೈಗೊಂಡಿದೆ. ಸ್ಟಾರ್ ಆಟಗಾರನ ಕೇಂದ್ರ ಒಪ್ಪಂದವನ್ನು ಪಿಸಿಬಿ ರದ್ದು ಪಡಿಸಿದೆ.
ಪಿಸಿಬಿ ವೈದ್ಯಾಧಿಕಾರಿಗಳ ತಂಡ ಹ್ಯಾರಿಸ್ ರೌಫ್ ಅವರ ಫಿಟ್ನೆಸ್ ವಿಚಾರದಲ್ಲಿನ ಸತ್ಯಾಸತ್ಯತೆಗಳನ್ನು ಚೀಫ್ ಸೆಲೆಕ್ಟರ್ ವಹಾಬ್ ರಿಯಾಝ್ ಅವರ ಗಮನಕ್ಕೆ ತಂದಿದೆ. ಬಳಿಕ ನಡೆಸಲಾದ ವಿಚಾರಣೆಯಲ್ಲಿ ರೌಫ್ ಸರಿಯಾದ ಕಾರಣಗಳನ್ನು ನೀಡದೇ ಇದ್ದ ಕಾರಣಕ್ಕೆ ಪಿಸಿಬಿ ಈ ಕಠಿಣ ಕ್ರಮ ಕೈಗೊಂಡಿದೆ ಎಂಬುದು ವರದಿಗಳ ಮೂಲಕ ಬೆಳಕಿಗೆ ಬಂದಿದೆ.