ನವದೆಹಲಿ: ಶಾಸಕ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದಾರೆ. ಯಾರು ಯಾರ ಮೇಲೆ ದೂರು ನೀಡಿದರೂ ಎಫ್ಐಆರ್ ಹಾಕುವುದು ನಿಯಮ. ತನಿಖೆ ನಡೆದ ಮೇಲೆ ಯಾರ ತಪ್ಪು ಗೊತ್ತಾಗಲಿದೆ. ದೂರು ಕೊಟ್ಟು ಶಿಕ್ಷಕಿ ತಮ್ಮ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
Coffee Vs Tea: ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀ ನಡುವಿನ ವ್ಯತ್ಯಾಸಗಳು: ಯಾವುದು ಆರೋಗ್ಯಕರ..?
ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ದಾಖಲಿಸಲು ಶಿಕ್ಷಕಿ ಸ್ವತಂತ್ರರು. ಆದರೆ ಶಿಕ್ಷಕಿ ಹಿಂದೂ ಧರ್ಮದ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ನಿರಂತರವಾಗಿ ಇದು ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂತಹ ಆರೋಪಗಳು ಬಂದಾಗ ಜನಪ್ರತಿನಿಧಿಗಳು ಅಲ್ಲಿಗೆ ಹೋಗಬೇಕಾಗುತ್ತದೆ. ಶಿಕ್ಷಕಿ ದೂರು ನೀಡಿದ ತಕ್ಷಣ ತಾನು ಮಾಡಿದ ತಪ್ಪು ಮುಚ್ಚಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರಲಿ ಎಂದರು.