ಬೆಂಗಳೂರು:- ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದವರಿಗೆ ಇಲಾಖೆ ಶಾಕ್ ಕೊಟ್ಟಿದೆ. ಬಿಎಂಟಿಸಿ (BMTC) ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.
ಒಟ್ಟು 456 ಪ್ರಕರಣ ದಾಖಲಿಸಿ 2,54,500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. 89 ಕಾರು ಚಾಲಕರಿಂದ 44,500, 54 ರೂ. ಆಟೋ ಚಾಲಕರಿಗೆ 27 ಸಾವಿರ ರೂ. 88 ಬೈಕ್ ಸವಾರರಿಂದ 44 ಸಾವಿರ ರೂ, 62 ಕ್ಯಾಬ್ ಚಾಲಕರಿಂದ 32,500 ರೂ. ಸೇರಿದಂತೆ 160 ಇತರೆ ವಾಹನ ಸವಾರರಿಂದ 80 ಸಾವಿರ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ. ಬಸ್ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್ನಿಂದ ಟ್ರಾಫಿಕ್ ಹೆಚ್ಚಾಗುತ್ತಿತ್ತು. ಮುಂದಿನ ದಿನಗಳಲ್ಲೂ ಕಾರ್ಯಾಚರಣೆಗೆ ಟ್ರಾಫಿಕ್ ಪೊಲೀಸರಿಂದ ಚಿಂತನೆ ನಡೆಸಲಾಗುತ್ತಿದೆ.
ಇತ್ತೀಚೆಗೆ ಬಸ್ನಲ್ಲಿ ಸರಗಳ್ಳತನ, ಲೈಂಗಿಕ ಕಿರುಕುಳದಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಆ ಮೂಲಕ ಐದು ಸಾವಿರ ಬಸ್ಗಳಿಗೆ ಅಳವಡಿಕೆ ಮಾಡಲಾಗಿತ್ತು.
ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಿಸಿ ಟಿವಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಈ ಪ್ಯಾನಿಕ್ ಬಟನ್ ವರ್ಕ್ ಮಾಡುತ್ತದೆಯೇ? ಬಟನ್ ಪ್ರೆಸ್ ಮಾಡಿದರೆ ಸೈರನ್ ಆಗುತ್ತಾ? ಕಂಟ್ರೋಲ್ ರೂಮ್ನಿಂದ ಡ್ರೈವರ್ ಕಂಡಕ್ಟರ್ಗಳಿಗೆ ಕರೆ ಬರುತ್ತಾ? ಬಸ್ನಲ್ಲಿರುವ ಬಟನ್ ಪ್ರೆಸ್ ಮಾಡಿದ ಮಹಿಳೆಯರ ವಿಡಿಯೋ ಕವರೇಜ್ ಆಗುತ್ತಾ ಎಂದು ಪರಿಶೀಲಿಸಲಾಗಿದೆ.
ಅದರಂತೆ, ಇನ್ನು ಮುಂದೆ ಬಿಎಂಟಿಸಿ ಬಸ್ನಲ್ಲಿ ಮಹಿಳೆಯರು ಸೇಫ್ ಆಗಿ ಓಡಾಡಬಹುದು ಎಂದು ಮನವರಿಕೆಯಾಗಿತ್ತು. ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಫುಲ್ ಸೆಫ್ಟಿ ಸಿಗಲಿದೆ