ಬೆಂಗಳೂರು:– ನಗರದ ಕ್ಯಾಷ್ ಪಾರ್ಮಸಿಯಲ್ಲಿ ಫೆ.15 ನೇ ತಾರೀಕು ಮಹಿಳಾ ಪೊಲೀಸ್ ಸಿಬ್ಬಂದಿ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದವನನ್ನು ಹೊಯ್ಸಳ ಸಿಬ್ಬಂದಿ ಬೆನ್ನತ್ತಿ ಹಿಡಿದ ಘಟನೆ ಜರುಗಿದೆ.
ಅಶೋಕನಗರ ಸಂಚಾರಿ ಠಾಣೆಯ ಮಹಿಳಾ ಪೇದೆ ಷಾಜಿಯಾ ತಬಸುಂ ಅವರು ಜಂಕ್ಷನ್ನಲ್ಲಿ ಸಂಜೆ 5 ಗಂಟೆಯ ಸುಮಾರಿಗೆ ಕರ್ತವ್ಯ ನಿರ್ವಹಿಸುತಿದ್ದರು. ಈ ವೇಳೆ ಆಕೆಯ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದ ದುಷ್ಕರ್ಮಿಯನ್ನು ಸ್ಥಳದಲ್ಲೇ ಇದ್ದ ಹೊಯ್ಸಳ ಸಿಬ್ಬಂದಿ ಅಲರ್ಟ್ ಆಗಿ ಸಿನಿಮೀಯ ರೀತಿಯಲ್ಲಿ ಸುಮಾರು ದೂರು ದುಷ್ಕರ್ಮಿಯನ್ನು ಹಿಂಬಾಲಿಸಿ ಹಿಡಿದಿದ್ದಾರೆ.
ಮೊಬೈಲ್ ಕಳ್ಳನ ಚೇಸ್ ಮಾಡಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಯ್ಸಳ ಸಿಬ್ಬಂದಿಯ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.