ಬೆಂಗಳೂರು: ಏರಿಯಾದಲ್ಲಿ ಹವಾ ಇಟ್ಟಿರೋ ರೌಡಿಶೀಟರ್ಗಳ ಜೊತೆ ಸ್ನೇಹ ಬೆಳೆಸೋ ಹುಡುಗಿಯರು ಈ ಸ್ಟೋರಿ ನೋಡಲೇಬೇಕು. ನಿಮ್ಮ ನಿಸ್ವಾರ್ಥ ಸ್ನೇಹ, ಪ್ರೀತಿಯನ್ನ ರೌಡಿ ಶೀಟರ್ಗಳು (Rowdy Sheeter) ದುರುಪಯೋಗ ಪಡಿಸಿಕೊಳ್ಳಬಾರದು.
ಏಕೆಂದರೆ ಇಲ್ಲೊಬ್ಬ ರೌಡಿ ಶೀಟರ್ ತನ್ನ ಪರಿಚಯಸ್ಥ ಮಹಿಳೆಗೆ ಜೈಲಿನಲ್ಲಿದ್ದುಕೊಂಡೇ (Bengaluru Jail) ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ರೌಡಿ ಮನೋಜ್ ಅಲಿಯಾಸ್ ಕೆಂಚ, ಬೆತ್ತಲೆ ಫೋಟೊ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ
Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ
ಕಳೆದ ಆಗಸ್ಟ್ನಲ್ಲಿ ಆರೋಪಿ ಕೆಂಚ, ಮಹಿಳೆಯ (Women) ತಾಯಿಗೆ ವಾಟ್ಸಪ್ ಮೂಲಕ ಮಗಳ ಬೆತ್ತಲೆ ಫೋಟೋ ಕಳುಹಿಸಿ 40 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು
ನಂತರ ಕೆಂಚನ ಸ್ನೇಹಿತ ಎಂದು ಹೇಳಿಕೊಂಡು ಕಾರ್ತಿಕ್ ಎಂಬಾತ ಕರೆ ಮಾಡಿ, ನಾನು ಕೆಂಚನ ಸ್ನೇಹಿತ ನಿಮ್ಮ ಮಗಳ ಫೋಟೋ, ವೀಡಿಯೋ ನಮ್ಮ ಬಳಿ ಇದೆ, ನನಗೆ ಮನು ಹೇಳಿದ್ದಾನೆ. ನೀವು 5 ಲಕ್ಷ ಹಣ ಕೊಡದೇ ಇದ್ದರೆ, ನಿಮ್ಮ ಮಗಳ ಫೋಟೋವನ್ನು ನಿಮ್ಮ ಅಳಿಯನಿಗೆ ಕಳಿಸ್ತೇವೆ ಎಂದು ಬೆದರಿಕೆ ಹಾಕಿದ್ದಾನೆ, ಸಂತ್ರಸ್ತ ಮಹಿಳೆಗೂ ಬೆದರಿಸಿದ್ದಾನೆ. ಫೆಬ್ರವರಿ 12 ರಂದು ಮತ್ತೆ ವಾಟ್ಸಪ್, ಫೇಸ್ಬುಕ್ ಮೆಸೆಂಜರ್ಗಳಲ್ಲಿ ಕಾಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.