ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಪ್ರೇಮಿಗಳ ದಿನದಂದು ತಮ್ಮ ಎರಡನೇ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ತಮ್ಮ ಮುದ್ದಾದ ಮಕ್ಕಳ ಜೊತೆ ಫೋಟೋ ಹಂಚಿಕೊಳ್ಳುವ ಮೂಲಕ ವಿಜಯ್ ಸೂರ್ಯ ಪ್ರೇಮಿಗಳ ದಿನದ ಶುಭ ಹಾರೈಸಿದ್ದಾರೆ.
ಫೆ.14 ವಿಜಯ್ ಸೂರ್ಯ ಪಾಲಿಗೆ ವಿಶೇಷ ದಿನವಾಗಿದ್ದು, ವ್ಯಾಲೆಂಟೈನ್ ಡೇ ದಿನದಂದು ವಿಜಯ್ ಸೂರ್ಯ ದಾಂಪತ್ಯ ಬದುಕಿಗೆ ಕಾಲಿಟ್ಟರು. ಚೈತ್ರಾ ಶ್ರೀನಿವಾಸ್ ಜೊತೆ ವಿಜಯ್ ಸೂರ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು 5 ವರ್ಷಗಳಾಗಿದ್ದು, ಇದೇ ವೇಳೆ ತಮ್ಮ 2ನೇ ಮಗುವಿನ ಮುಖವನ್ನು ನಟ ರಿವೀಲ್ ಮಾಡಿದ್ದಾರೆ.
ಮೊದಲ ಮಗುವಿಗೆ ಸೋಹನ್ ಸೂರ್ಯ, 2ನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ಹೆಸರಿಟ್ಟಿದ್ದಾರೆ. ಇದೀಗ ಕುಟುಂಬದ ಫೋಟೋ ಶೇರ್ ಮಾಡಿ ಹ್ಯಾಪಿ ಆ್ಯನಿವರ್ಸರಿ ಬಾಬಾ ಎಂದು ಪತ್ನಿಗೆ ವಿಜಯ್ ಶುಭ ಹಾರೈಸಿದ್ದಾರೆ.
‘ಅಗ್ನಿಸಾಕ್ಷಿ’ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ವಿಜಯ್ ಸೂರ್ಯ ಇದೀಗ ತೆಲುಗು ಸೀರಿಯಲ್ ಜೊತೆಗೆ ಸಿನಿಮಾದ ಕೆಲಸಗಳಲ್ಲು ಬ್ಯುಸಿಯಾಗಿದ್ದಾರೆ. ಸದ್ಯ ‘ನಮ್ಮ ಲಚ್ಚಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.