ಮಂಡ್ಯ:- ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ ಹಲ್ಲೆ ನಡೆಸಿದ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ
ಇಲ್ಲಿನ ಪೂರ್ವ ಠಾಣೆ ಪಿಎಸ್ಐ ಅಯ್ಯನಗೌಡ ಎಂಬುವವರು ದರ್ಪ ಮೆರೆದಿದ್ದು, ಮಂಡ್ಯದ ಅಶೋಕ್ ನಗರ ನಿವಾಸಿ ರೂಪದೇವಿ ಎಂಬಾಕೆಯ ಮೇಲೆ ಪೊಲೀಸ್ಠಾಣೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆ ಪಿಎಸ್ಐ ವಿರುದ್ದ ಮಹಿಳೆಯ ತಾಯಿ ಗೌರಮ್ಮ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪಿಎಸ್ಐರನ್ನ ಅಮಾನತು ಮಾಡಿ ಮಂಡ್ಯ ಎಸ್ಪಿ ಯತೀಶ್ ಆದೇಶ ಮಾಡಿದ್ದಾರೆ
ಸಂತ್ರಸ್ಥ ಮಹಿಳೆ ರೂಪದೇವಿ ಅವರು ತನ್ನ ಕುಟುಂಬಸ್ಥರ ಜೊತೆ ಮಂಡ್ಯದ ಅಶೋಕ್ ನಗರದಲ್ಲಿ ವಾಸವಿದ್ದು, ನಗರ ಪ್ರದೇಶದಲ್ಲೇ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ರಸ್ತೆಯಲ್ಲಿ ಹಸುಗಳನ್ನ ಬಿಡುತ್ತಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಏಕಾಏಕಿ ಜೀಪ್ನಲ್ಲಿ ಬಂದ್ದಿದ್ದ ಮಂಡ್ಯದ ಪೂರ್ವ ಠಾಣೆ ಪಿಎಸ್ಐ ಅಯ್ಯನಗೌಡ, ಯಾವುದೇ ಮಹಿಳೆ ಪೇದೆ ಇಲ್ಲದೇ ಜೀಪ್ನಲ್ಲಿಯೇ ರೂಪದೇವಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ಠಾಣೆಯಲ್ಲಿಯೇ ಹಲ್ಲೆ ಮಾಡಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಕೆಲ ಸಂಘಟನೆ ಕಾರ್ಯಕರ್ತರು ಠಾಣೆಯ ಬಳಿ ಹೋಗಿ ಪಿಎಸ್ ಐ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮಹಿಳೆಯನ್ನ ವಾಪಾಸ್ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.