ಮಹಾರಾಷ್ಟ್ರ: ಅಸಾಮಾನ್ಯ ಸೊಳ್ಳೆ ಸುಂಟರಗಾಳಿಗಳು ಸುತ್ತುತ್ತಿರುವುದು ಮಹಾರಾಷ್ಟ್ರದ ಪುಣೆಯ ಮುತಾ ನದಿಯ ಮೇಲೆ ಕಂಡುಬಂದಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಗರದ ನೈಟೈ ಲೈಫ್ ಈಗ ಇನ್ನೂ ಹೆಚ್ಚು ಝೇಂಕರಿಸುತ್ತಿದೆ ಎಂದು ನೆಟ್ಟಿಗರು ಹಾಸ್ಯ ಸಿಡಿಸುತ್ತಿದ್ದಾರೆ.
ಹೌದು, ಪುಣೆಯ ಸ್ಕೈಲೈನ್ನಲ್ಲಿ ಗುಯ್ಗುಡುತ್ತಾ ಸೊಳ್ಳೆಗಳು ಸುಂಟರಗಾಳಿಯಾಗಿ ಕೇಶವನಗರ ಮತ್ತು ಖಾರಾಡಿ ಸ್ಥಳದ ಮೇಲೆ ಹಾರಿದವು. ಘಟನೆಯ ವೀಡಿಯೊಗಳು ವೈರಲ್ ಆಗಿವೆ. ಭಯಭೀತರಾದ ನೆಟಿಜನ್ಗಳು ಫ್ಲೇಮ್ಥ್ರೋವರ್ಗಳಿಗೆ ಕರೆ ನೀಡಿದ್ದಾರೆ.
Horrifying ‘mosquito tornado’ near Pune’s Keshav Nagar has sparked outrage, residents have demanded removal of hyacinths. Mosquito tornadoes like this have been reported from Central America and Russia usually during the rainy season.pic.twitter.com/n4SAwJlnzv
— Pune City Life (@PuneCityLife) February 10, 2024
ಇಂತಹ ಸೊಳ್ಳೆ ‘ಸುಂಟರಗಾಳಿಗಳು’ ಮಹಾರಾಷ್ಟ್ರದಲ್ಲಿ ಹೊಸ ದೃಶ್ಯವಲ್ಲವಾದರೂ, ಪುಣೆಯಂತಹ ನಗರ ಪರಿಸರದಲ್ಲಿ ಮುತಾ ನದಿಯ ಮೇಲೆ ಅವು ಸುತ್ತುತ್ತಿರುವುದನ್ನು ನೋಡುವುದು ಅಪರೂಪ. ಇತ್ತೀಚಿನ ಹವಾಮಾನ ಪರಿಸ್ಥಿತಿಗಳು ಕೀಟಗಳಿಗೆ ಅನುಕೂಲಕರ ಸಂತಾನೋತ್ಪತ್ತಿಯನ್ನು ಸೃಷ್ಟಿಸಿವೆ ಎಂದು ವರದಿಯಾಗಿದೆ.