ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಖಾನ್ ತ್ರಯರು ಇದೀಗ ಕೊಂಚ ಸೈಲೆಂಟ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನ ಸಿನಿಮಾಗಳನ್ನು ಮಾಡಿದ್ದ ಶಾರುಖ್ ಖಾನ್ ಇದೀಗ ಮತ್ತೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅತ್ತ ಆಮಿರ್ ಖಾನ್ ಸದ್ದಿಲ್ಲದೆ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ನಟ ಸಲ್ಮಾನ್ ಖಾನ್ ಹೇಗಾದ್ರು ಮಾಡಿ ಸ್ಟಾರ್ ಪಟ್ಟಕ್ಕೆ ಏರಬೇಕು ಎಂದು ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋಗಿದ್ದಾರೆ.
ಜವಾನ್ ಸಿನಿಮಾದ ಬಳಿಕ ಶಾರುಖ್ ಖಾನ್ ಮತ್ತೆ ಸ್ಟಾರ್ ಪಟ್ಟಕ್ಕೇರಿದ್ದಾರೆ. ಇನ್ನೂ ನಟ ರಣಬೀರ್ ಕಪೂರ್ ಕೂಡ ತಮ್ಮ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ. ಇದೇ ಕಾರಣಕ್ಕೆ ಬಾಲಿವುಡ್ನ ಸ್ಟಾರ್ ನಟರ ಕಣ್ಣು ದಕ್ಷಿಣ ಭಾರತದತ್ತ ನೆಟ್ಟಿದ್ದೆ. ಇದೀಗ ನಟ ಸಲ್ಮಾನ್ ಖಾನ್ ಕೂಡ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ.
ತಮಿಳಿನಲ್ಲಿ ‘ಗಜಿನಿ’, ‘ತುಪ್ಪಾಕಿ’, ‘7ತ್ ಸೆನ್ಸ್’, ‘ಕತ್ತಿ’, ತೆಲುಗಿನಲ್ಲಿ ಚಿರಂಜೀವಿ ನಟನೆಯ ‘ಸ್ಟಾಲಿನ್’, ಮಹೇಶ್ ಬಾಬು ನಟನೆಯ ‘ಸ್ಪೈಡರ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್, ಸಲ್ಮಾನ್ ಖಾನ್ರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಲ್ಮಾನ್ ಹಾಗೂ ಮುರುಗದಾಸ್ ಕಾಂಬಿನೇಷನ್ ನ ಸಿನಿಮಾಗೆ ಈಗಾಗಲೇ ಕತೆ ಫೈನಲ್ ಆಗಿದ್ದು, ಲೊಕೇಶನ್, ಇತರೆ ಪಾತ್ರವರ್ಗಗಳ ಆಯ್ಕೆ ನಡೆಯುತ್ತಿದೆ. ಸಲ್ಮಾನ್ ಖಾನ್ರ ಆತ್ಮೀಯ ಸ್ನೇಹಿತ್ ಸಾಜಿದ್ ನಾಡಿಯಾವಾಲಾ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಭಾರಿ ಬಜೆಟ್ ಸಿನಿಮಾವಾಗಿರಲಿದೆಯಂತೆ. ಸಿನಿಮಾಕ್ಕೆ ಸುಮಾರು 500 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಕೆಲವು ದೊಡ್ಡ ನಟ-ನಟಿಯರು ಈ ಸಿನಿಮಾದಲ್ಲಿ ಇರಲಿದ್ದಾರೆ.
ಸಿನಿಮಾದ ಚಿತ್ರೀಕರಣ ಪೋರ್ಚುಗಲ್ ಹಾಗೂ ಯೂರೋಪ್ ಹಾಗೂ ಕೆಲವು ಭಾಗಗಳ ಚಿತ್ರೀಕರಣ ಭಾರತ ದೇಶಗಳಲ್ಲಿ ನಡೆಯಲಿದೆ.