ಶಿವಮೊಗ್ಗ:- ಇದು ಮಲೆನಾಡಿನ ಸುಂದರಿಯ ಕಥೆ. ಆಕೆ ಶಿವಮೊಗ್ಗದಲ್ಲಿ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಆಕೆಯ ಗಂಡನಾಗಿದ್ದವನು ಆರೋಪ ಮಾಡಿದ್ದಾನೆ. ಮಲೆನಾಡಿನ ಹುಡುಗರೇ ಎಚ್ಚರ.. ಈ ಹುಡುಗಿ ಹಣಕ್ಕಾಗಿ ಮದುವೆಯಾಗಿ ನಂತರ ಮೋಸ ಮಾಡ್ತಾಳೆ ಎಂದು ಆರೋಪಿಸಿದ್ದಾನೆ.
ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಸಂಕೇತ್ ಮತ್ತು ಸನ್ನಿಧಿಯ ಮದುವೆ 2023ರ ಫೆಬ್ರವರಿಯಲ್ಲಿ ನಡೆದಿತ್ತು. ಅಂದರೆ ಒಂದು ವರ್ಷದ ಹಿಂದೆ ಅವರಿಬ್ಬರು ಒಂದಾಗಿದ್ದರು. ಆದರೆ, ಅವರ ಖುಷಿಯ ದಿನಗಳು ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿತ್ತು. ಒಂದೆರಡು ತಿಂಗಳು ಸಂಸಾರ ಮಾಡಿ ಕೈ ಕೊಟ್ಟ ಈ ಸುಂದರಿ ನೀನು ಕೀಳು ಜಾತಿಯವನೆಂದು ಆರೋಪ ಮಾಡಿ ದೂರ ಮಾಡಿದ್ದಾಳಂತೆ. ಈಗ ಬೇರೊಬ್ಬ ಹುಡುಗನ ಜತೆ ಓಡಾಡುತ್ತಿದ್ದಾಳಂತೆ.
ಸಂಕೇತ್ನನ್ನು ಮದುವೆಯಾಗುವ ಮುನ್ನವೂ ಕೆಲವು ತಿಂಗಳ ಕಾಲ ಆಕೆ ಪ್ರೀತಿಸಿದ್ದಳು. ಪ್ರೀತಿ ಪ್ರೇಮ ಅಂತ ಅವನ ಬೆನ್ನುಬಿದ್ದಿದ್ದ ಆಕೆ ಸುಮಾರು 20 ಲಕ್ಷ ರೂ.ಯನ್ನು ಪಡೆದಿದ್ದಳಂತೆ. ಕೊನೆಗೆ ಮದುವೆಯೂ ಆಗಿದೆ. ಆದರೆ, ಜಾತಿ ಹೆಸರು ಹೇಳಿ ಜಾರಿಕೊಂಡಿದ್ದಾಳೆ ಎನ್ನುವುದು ಸಂಕೇತ್ ದೂರು.
ಈ ನಡುವೆ, ತನಗೆ ಮೋಸ ಮಾಡಿದ ಸನ್ನಿಧಿ ಬೇರೆ ಹುಡುಗರಿಗೂ ಇದೇ ರೀತಿ ಮೋಸ ಮಾಡಿದ್ದಾಳೆ. ಬೇರೆ ಯುವಕರ ಜತೆಗೂ ಆಕೆಗೆ ಸಂಬಂಧವಿದೆ ಎಂದೆಲ್ಲ ಸಂಕೇತ್ ಆರೋಪ ಮಾಡಿದ್ದಾರೆ. ಸನ್ನಿಧಿಗೆ ಈ ಹಿಂದೆ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದೆ ಎನ್ನುವುದು ಸಂಕೇತ್ ಆರೋಪ.
ಸಂಕೇತ್ ಮಾಡಿದ ಆರೋಪದಲ್ಲಿ ನಿಜವೆಷ್ಟು ಸುಳ್ಳೆಷ್ಟು ಎನ್ನುವುದು ಸ್ಪಷ್ಟವಿಲ್ಲ. ಯಾಕೆಂದರೆ ಸನ್ನಿಧಿ ಮದುವೆಯಾಗಿ ಕೈಬಿಟ್ಟಿದ್ದಾಳೆ ಎಂಬ ಕಾರಣಕ್ಕಾಗಿ ಆತ ಈ ರೀತಿ ಆರೋಪ ಮಾಡಿದ್ದಾನೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ