ಮೊದಲೆಲ್ಲ ಪೋಸ್ಟ್ ಆಫೀಸ್ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್ ಆಫೀಸ್ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್ ಬ್ಯಾಂಕ್ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಹಾಗಾದರೆ, ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.
ನೀವು ಪ್ರತಿ ತಿಂಗಳು 10,000 ರೂಪಾಯಿಯನ್ನು ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ಬಂಪರ್ ರಿಟರ್ನ್ಸ್ ನಿಮ್ಮ ಕೈ ಸೇರುತ್ತದೆ.ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದ ಹಣಕಾಸು ಸಚಿವಾಲಯ
ಹಣಕಾಸು ಸಚಿವಾಲಯವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಈ ಬದಲಾವಣೆಯ ಅಡಿಯಲ್ಲಿ, 5 ವರ್ಷಗಳ ಮರುಕಳಿಸುವ ಠೇವಣಿ ಹೆಚ್ಚು ಆಕರ್ಷಕವಾಗಿದೆ.
ಸರ್ಕಾರವು ತನ್ನ ಬಡ್ಡಿದರವನ್ನು 30 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಈಗ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿಯು ಶೇಕಡಾ 6.2 ರ ಬದಲಿಗೆ ಶೇಕಡಾ 6.5 ರಷ್ಟಿರುತ್ತದೆ. ಇದಲ್ಲದೇ, 1 ಮತ್ತು 2 ವರ್ಷಗಳ ಕಾಲಾವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸಹ 10 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಲಾಗಿದೆಯಂತೆ.
ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದೀರಾ: ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ರೆ ಖಾತೆ ನಿಷ್ಕ್ರೀಯ
ಇದು ಮಧ್ಯಮ ಅವಧಿಯ ಹೂಡಿಕೆದಾರರಿಗೆ ಇರುವ ಯೋಜನೆಯಾಗಿದೆ. 6.5 ರಷ್ಟು ಬಡ್ಡಿ ವಾರ್ಷಿಕವಾಗಿ ಲಭ್ಯವಿದೆ, ಆದರೆ ಲೆಕ್ಕಾಚಾರವನ್ನು ತ್ರೈಮಾಸಿಕ ಸಂಯೋಜನೆಯ ಆಧಾರದ ಮೇಲೆ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುವವರು ಕನಿಷ್ಠ ಮೊತ್ತ 100 ರೂಪಾಯಿಯಿಂದ 100 ರ ಗುಣಕಗಳಲ್ಲಿ ಯಾವುದೇ ಮೊತ್ತವನ್ನು ಸಹ ಠೇವಣಿ ಮಾಡಬಹುದು. ಬ್ಯಾಂಕ್ಗಳಿಗಿಂತ ಭಿನ್ನವಾಗಿ, ಪೋಸ್ಟ್ ಆಫೀಸ್ನ ಮರುಕಳಿಸುವ ಠೇವಣಿಗಳು ಕೇವಲ 5 ವರ್ಷಗಳವರೆಗೆ ಮಾತ್ರ ಇರುತ್ತವೆ. ನಂತರ ಅದನ್ನು ಮತ್ತೆ 5 ವರ್ಷಗಳವರೆಗೆ ಬೇಕಾದರೆ ವಿಸ್ತರಿಸಿಕೊಳ್ಳಬಹುದು. ಈ ವಿಸ್ತರಣೆಯ ಸಮಯದಲ್ಲಿ, ನೀವು ಹಳೆಯ ಬಡ್ಡಿದರಗಳ ಲಾಭವನ್ನು ಮಾತ್ರ ಪಡೆಯುತ್ತೀರಿ