ಬಾಲಿವುಡ್ ನಟಿ, ವಿರಾಟ್ ಕೋಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ವಿಚಾರದಿಂದ ಪದೇ ಪದೇ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಎರಡನೇ ಬಾರಿಗೆ ಪ್ರೆಗ್ನೆಂಟ್ ಆದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಮಾಹಿತ ಹಂಚಿಕೊಂಡಿಲ್ಲ.
ಆದರೆ ಇದೀಗ ಅನುಷ್ಕಾ ಶರ್ಮಾ ಆರೋಗ್ಯದ ಕುರಿತು ಸುದ್ದಿಯೊಂದು ಹರಿದಾಡುತ್ತದೆ. ಅನುಷ್ಕಾ ಆರೋಗ್ಯದ ಕುರಿತು ಪರ್ತಕರ್ತ ಅಭಿಷೇಕ್ ತ್ರಿಪಾಠಿ ಹಾಕಿರುವ ಪೋಸ್ಟ್ ಇದೀಗ ಸುದ್ದಿಯಾಗಿದೆ. ಅದರಲ್ಲಿ ಅನುಷ್ಕಾ ಮತ್ತು ವಿರಾಟ್ ಹೆಸರನ್ನು ಉಲ್ಲೇಖಿಸಿದ್ದಾರೆ.
‘ನಾಲ್ಕು ವಿಷಯಗಳು: ಒಂದು: ಡಿವಿಲಿಯರ್ಸ್ ಹೇಳಿದ್ದು ಸರಿ. ಎರಡು: ಕೆಲವು ಸಮಸ್ಯೆಗಳ ಕಾರಣ ವಿದೇಶದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಮತ್ತು ಕುಟುಂಬದೊಂದಿಗೆ ಇರಲು ವಿರಾಟ್ ನಿರ್ಧರಿಸಿದ್ದಾರೆ. ಮೂರು: ಬಿಸಿಸಿಐ ಅನುಮತಿಯೊಂದಿಗೆ ಈ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರಲು ನಿರ್ಧರಿಸಿದ್ದಾರೆ. ನಾಲ್ಕು: ನಾವು ಅವರ ಸಂತೋಷದ ಭವಿಷ್ಯಕ್ಕಾಗಿ ಪ್ರಾರ್ಥಿಸಬೇಕು’ ಎಂದು ಪೋಸ್ಟ್ ಮಾಡಲಾಗಿದೆ. ವಿರಾಟ್ ಮತ್ತು ಅನುಷ್ಕಾ ಅವರ ಖಾಸಗಿ ಜೀವನವನ್ನು ಗೌರವಿಸದ ಪತ್ರಕರ್ತರನ್ನು ಕೆಲವರು ಟೀಕಿಸಿದ್ದಾರೆ. ಕೆಲವರು ಅನುಷ್ಕಾ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರಿಗೆ ಅನಾರೋಗ್ಯ ಉಂಟಾಗಿರಬಹುದು ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಇದೀಗ ಅನುಷ್ಕಾ ಆರೋಗ್ಯದ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿದ್ದು ಆದಷ್ಟು ಬೇಗ ವಿರಾಟ್ ದಂಪತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.