ರೆಡ್ಮಿ ತನ್ನ ಹೊಸ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ಫೋನ್ ಎ3ಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14ರಂದು ರೆಡ್ಮಿ ಎ 3 ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ.
ರೆಡ್ಮಿ ಎ3 ಬಿಡುಗಡೆ ಆದ ಬಳಿಕ ಗ್ರಾಹಕರು ಇದನ್ನು ಫ್ಲಿಪ್ಕಾರ್ಟ್ ಇಕಾಮರ್ಸ್ ವೆಬ್ಸೈಟ್ನಲ್ಲಿ ಖರೀದಿಸಬಹುದಾಗಿದೆ.
ರೆಡ್ಮಿ ಎ3 ಹ್ಯಾಲೊ ಡಿಸೈನ್ ಅನ್ನು ಹೊಂದಿದೆ. ಇದು ದೊಡ್ಡ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಹೊಂದಿದ್ದು, 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇನ್ನೊಂದು ವಿಶೇಷತೆ ಎಂದರೆ 6GB RAM ಕಾನ್ಫಿಗರೇಷನ್ ಜತೆಗೆ, 6GB RAM ವರ್ಚುಯಲ್ ಸಪೋರ್ಟ್ ಮಾಡುವ ಫೀಚರ್ ಇದರಲ್ಲಿದೆ.
ರೆಡ್ಮಿ ಎ3 ಮೊಬೈಲ್ 6.71 ಇಂಚಿನ ಹೆಚ್ಡಿ+ ಎಲ್ಸಿಡಿ ಸ್ಕ್ರೀನ್, ಮಿಡಿಯಾಟೆಕ್ ಹೀಲಿಯೊ ಜಿ36 SoC.
AI ಚಾಲಿತ 13MP ಡ್ಯುಯಲ್ ಹಿಂಬದಿ ಕ್ಯಾಮೆರಾಗಳು, 8MP ಸೆಲ್ಫಿ ಕ್ಯಾಮೆರಾ.ಡ್ಯುಯಲ್ ಸಿಮ್ ಅಳವಡಿಕೆಯ ವೈಶಿಷ್ಟ್ಯ, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿದೆ.
ರೆಡ್ಮಿ ಎ3 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಮೊದಲೇ ಹೇಳಿದಂತೆ ಬಜೆಟ್ ಸ್ನೇಹಿಯಾದ ರೆಡ್ಮಿ ಎ3 ಸ್ಮಾರ್ಟ್ಫೋನ್ನ ಭಾರತದಲ್ಲಿನ ಖರೀದಿ ಬೆಲೆ ರೂ.7000-9000 ನಡುವೆ ಸಿಗಲಿದೆ.