ಪ್ರೀತಿ, ಒಲುಮೆ, ಪ್ರೇಮ ಅದೆಲ್ಲ ಅದೆಷ್ಟೆಷ್ಟೋ ಕತೆಗಳಲ್ಲಿ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಓದಿದ್ದೇವೆ. ಆದ್ರೂ ಇದರಂಥ ಅರ್ಥ ಆಗದಿರುವ ವಿಚಾರ ಮತ್ತೊಂದಿಲ್ಲ. ಎಲ್ಲರೂ ಬಯಸುವ ಆದರೂ ಹೊರಮುಖಿಯಾಗಿ ಅದನ್ನು ಅಪರಾಧವೆನ್ನುವ ಯಾವುದಾದರೂ ವಿಷಯ ಲೋಕದಲ್ಲಿದ್ದರೆ ಅದು ಪ್ರೇಮ.
ಇನ್ನೇನು ಪ್ರೀತಿಯ ಪಯಣದಲ್ಲಿ ಜೊತೆಯಾಗಿ ಸಾಗಬೇಕು ಎಂದುಕೊಂಡವರು ಮನಸ್ಸಿನಲ್ಲಿ ಬಚ್ಚಿಟ್ಟ ಪ್ರೀತಿಯನ್ನು ತನ್ನ ಪ್ರೇಯಸಿಯ ಮುಂದೆ ನಿವೇದಿಸಿಕೊಳ್ಳಲು ತಯಾರಿಯನ್ನು ನಡೆಸಿದ್ದಾರೆ. ಪ್ರಪಂಚದಾದಂತ್ಯ ಇಷ್ಟೆಲ್ಲಾ ಸಂಭ್ರಮದಿಂದ ಆಚರಿಸುವ ಪ್ರೇಮಿಗಳ ದಿನವನ್ನು ಈ ದೇಶಗಳ ಜನರು ಎದುರು ನೋಡುವುದೇ ಇಲ್ಲ. ಇಲ್ಲಿನ ಜನರು ಪ್ರೀತಿಸುತ್ತಾರೆ. ಆದರೆ ಪ್ರೇಮಿಯ ದಿನ ಆಚರಿಸುವುದಿಲ್ಲ.
ಸೌದಿ ಅರೇಬಿಯಾ : ಮುಸ್ಲಿಂ ರಾಷ್ಟ್ರವಾಗಿರುವ ಸೌದಿಯಲ್ಲಿ ಪ್ರೇಮಿಗಳ ದಿನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಪ್ರೇಮಿಗಳ ಆಚರಣೆ ಮಾಡಿದ್ದ ಕಾರಣ 2014ರಲ್ಲಿ 39 ಮಂದಿ ಜೈಲು ಸೇರಿದ್ದರು.
ಉಜ್ಬೇಕಿಸ್ತಾನ್: ಪ್ರೇಮಿಗಳ ದಿನವನ್ನು ಉಜ್ಬೇಕಿಸ್ತಾನ್ ವು ನಿಷೇಧಿಸಿದೆ. ಈ ದೇಶದಲ್ಲಿ 2012 ರವರೆಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ನಂತರದಲ್ಲಿ ದೇಶದ ಶಿಕ್ಷಣ ಸಚಿವಾಲಯವು ಈ ದಿನವನ್ನು ಆಚರಿಸುವುದರನ್ನು ವಿರೋಧಿಸುವ ಮೂಲಕ ಪ್ರಕಟಣೆಯನ್ನು ಹೊರಡಿಸಿತು
ಇರಾನ್: ಮುಸ್ಲಿಂ ರಾಷ್ಟ್ರವಾಗಿರುವ ಇರಾನ್ ನಲ್ಲಿ ಪ್ರೇಮಿಗಳ ದಿನದ ಉಡುಗೊರೆಗಳು ಮತ್ತು ಸಂಬಂಧಿತ ವಸ್ತುಗಳನ್ನು ಸರ್ಕಾರವು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಇಲ್ಲಿನ ಜನರು ಪ್ರೇಮಿಗಳ ದಿನದಂದು ಮೆಹ್ರಿಗನ್ ಹಬ್ಬವನ್ನು ಆಚರಿಸುತ್ತಾರೆ
ಮಲೇಷ್ಯಾ: ಈ ದೇಶದಲ್ಲಿ ಸಂಪೂರ್ಣವಾಗಿ ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಲಾಗಿದೆ. 2005ರಲ್ಲಿ ಪ್ರೇಮಿಗಳ ದಿನದ ಬಗ್ಗೆ ಫತ್ವಾ ಹೊರಡಿಸಲಾಗಿತ್ತು. ಮುಸ್ಲಿಂ ಧರ್ಮದ ವಿರುದ್ಧ ಆಚರಣೆಯಾಗಿದೆ ಎಂದು ಪರಿಗಣಿಸಲಾಗಿದೆ.
ಪಾಕಿಸ್ತಾನ: ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗುವುದಿಲ್ಲ. ಕಳೆದ ಫೆಬ್ರವರಿ 7, 2018 ರಂದು ಇಸ್ಲಾಮಾಬಾದ್ ಹೈಕೋರ್ಟ್ನಿಂದ ಪ್ರೇಮಿಗಳ ದಿನಾಚರಣೆ ಮತ್ತು ಮಾಧ್ಯಮ ಪ್ರಸಾರದ ಮೇಲೆ ನಿಷೇಧಿಸಲಾಗಿತ್ತು