ಕೊಲಂಬೋ: ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ.
ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದರು. ಯುಪಿಐ ಮಾತ್ರವಲ್ಲದೆ ಭಾರತದ ರುಪೇ ಕಾರ್ಡ್ ಅನ್ನು ಕೂಡ ಮಾರಿಷಸ್ನಲ್ಲಿ ಬಳಸಬಹುದಾಗಿದೆ
ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ‘ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಜೋಡಿಸಲಾಗಿದೆ’ ಎಂದರು.
ಯುಪಿಐ ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿಯನ್ನು ಕಾರ್ಯಗತಗೊಳಿಸುತ್ತಿದೆ. ಡಿಜಿಟಲ್ ಪಾವತಿಯು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೊದಲು ಪ್ರತಿಸ್ಪಂದಿಸುವ ರಾಷ್ಟ್ರ ಎಂದರೆ ಭಾರತ. ಅದು ಹೀಗೆಯೇ ಮುಂದುವರಿಯುತ್ತದೆ. ಇದರಿಂದಾಗಿ ಭಾರತೀಯರು ಮಾರಿಷಸ್ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದರೆ ಅಥವಾ ಅವೆರಡೂ ದೇಶದವರು ಭಾರತಕ್ಕೆ ಬಂದಾಗ ಹಣ ಪಾವತಿ ಇನ್ನಷ್ಟು ಸುಲಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ನೆರೆಹೊರೆಯ ಮೊದಲ ನೀತಿಯ ಮೇಲೆ ಭಾರತದ ಗಮನವನ್ನು ಇದು ತೋರಿಸುತ್ತದೆ. ಇದು ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಂಬಲವಾಗಿರಲಿ, ಭಾರತವು ಮೊದಲ ಪ್ರತಿಸ್ಪಂದಕವಾಗಿದೆ ಮತ್ತು ಅದು ಮುಂದುವರಿಯುತ್ತದೆ ಎಂದರು.