ಮಂಡ್ಯ:- ಲೋಕಸಭಾ ಚುನಾವಣೆಗೋ ಕೇವಲ ತಿಂಗಳು ಬಾಕಿ ಇದ್ದು, ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಕಣದಿಂದ ನಿಖಿಲ್ ಹಿಂದೆ ಸರಿದಿದ್ದಾರೆ.
ಹಾಗಿದ್ರೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಆಯ್ಕೆ ಮತ್ತೆ ದಳಪತಿಗಳಿಗೆ ಗೊಂದಲವಾಗಿದೆ.
ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಹಿಂದೆ ಸರಿದ ಹಿನ್ನಲೆ ಇದೀಗ ಹೆಚ್ಡಿ ಕುಮಾರಸ್ವಾಮಿ ಅವರ ಬಳಿಗೆ ನಾಯಕರು ಹೋಗಲಿದ್ದಾರೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕೆಂದು ದಳಪತಿಗಳು ಒತ್ತಡ ಹಾಕಲಿದ್ದಾರೆ. ನೀವು ಬನ್ನಿ ಇಲ್ಲ ನಿಖಿಲ್ ಮನವೊಲಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ. ಮಂಡ್ಯದಿಂದ ಮಾಜಿ ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್ಗೌಡ ಟಿಕೆಟ್ ಆಕಾಂಕ್ಷಿತರು. ಮೂವರಲ್ಲಿ ಒಬ್ಬರು ಸ್ಪರ್ಧೆ ಮಾಡಿ ನಾವು ಇರ್ತೀವಿ ಎಂದು ಕುಮಾರಸ್ವಾಮಿ ಅವರು ಹೇಳುವ ಸಾಧ್ಯತೆ ಇದೆ. ಇಲ್ಲ ನಿಖಿಲ್ ಮನವೊಲಿಸಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಅಥವಾ ತಾವೇ ಮಂಡ್ಯ ಅಖಾಡಕ್ಕೆ ಪ್ರವೇಶ ಮಾಡ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.
ಲೋಕಸಭೆಗೆ ಸ್ಪರ್ಧಿಸದಿರಲು ನಿಖಿಲ್ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಯಾವುದೇ ಒತ್ತಡ ಬಂದರೂ ನಾನೂ ಸ್ಪರ್ಧಿಸಲ್ಲ ಎಂಬ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಿಖಿಲ್ ಸ್ಪರ್ಧೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಮಂಡ್ಯದಿಂದಲೇ ನಿಖಿಲ್ ಸ್ಪರ್ಧೆಗೆ ಪದೇ ಪದೇ ಒತ್ತಾಯಿಸುತ್ತಿದ್ದರು. ನಿಖಿಲ್ ಸ್ಪರ್ಧೆಗೆ ಒಪ್ಪದಿರಲು ಕಾರಣಗಳೇನು? ನಿಖಿಲ್ ನಿರ್ಧಾರದ ಹಿಂದೆ ರಾಜಕೀಯ ಭವಿಷ್ಯದ ಲೆಕ್ಕಾಚಾರ ಇದಿಯಾ? ಎನ್ನಲಾಗುತ್ತಿದೆ. ಈಗಾಗಲೇ ಎರಡು ಸೋಲು ಕಂಡಿರುವ ನಿಖಿಲ್ಗೆ ಮತ್ತೆ ಸೋಲಾದ್ರೆ ರಾಜಕೀಯ ಭವಿಷ್ಯ ಕಮರುವ ಚಿಂತೆ ಇದೆ. ನಿಖಿಲ್ ಸ್ಪರ್ಧೆಯೇ ವಿರೋಧಿಗಳಿಗೆ ಚುನಾವಣಾ ಅಸ್ತ್ರವಾಗುವ ಸಾಧ್ಯತೆ ಇದೆ. ಅವಕಾಶವಾದಿ ರಾಜಕಾರಣಿ ಎಂದು ಹಣೆಪಟ್ಟಿ ಕಟ್ಟುವ ಭೀತಿ ಇದೆ