ಟೀಮ್ ಇಂಡಿಯಾ ಎದುರು ಟೆಸ್ಟ್ ಸರಣಿ ಗೆಲುವಿನ ಕನಸು ಕಂಡಿರುವ ಇಂಗ್ಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ ಈ ಬಾರಿ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಅಂಥದ್ದೇ ಐತಿಹಾಸಿಕ ಸಾಧನೆ ಮೆರೆಯಲು ಎದುರು ನೋಡುತ್ತಿತ್ತು
ಎರಡೂ ಇನಿಂಗ್ಸ್ಗಳಲ್ಲಿ ಅನುಭವಿಸಿದ ವೈಫಲ್ಯ ಕಾರಣ 106 ರನ್ಗಳ ಸೋಲಿನ ಮುಖಭಂಗ ಎದುರಾಯಿತು. ಅಂದಹಾಗೆ ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಮುಖ ಸ್ಪಿನ್ನರ್ ಜಾಕ್ ಲೀಚ್ ಅವರ ಸೇವೆಯನ್ನು ಕಳೆದುಕೊಂಡಿತ್ತು.
ಇದೀಗ ಗಾಯದಿಂದ ಗುಣಮುಖರಾಗಲು ವಿಫಲರಾಗಿರುವ ಕಾರಣ ಸರಣಿಯ ಉಳಿದ ಮೂರೂ ಪಂದ್ಯಗಳಿಂದ ಹೊರಗುಳಿಯುವಂತ್ತಾಗಿದೆ. ದ್ವಿತೀಯ ಟೆಸ್ಟ್ ಬಳಿಕ ಅಬುಧಾಬಿಗೆ ತೆರಳಿ ವಿಶ್ರಾಂತಿ ತೆಗೆದುಕೊಂಡಿರುವ ಇಂಗ್ಲೆಂಡ್ ತಂಡ ಫೆ.15ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುರುವಾಗಲಿರುವ ಮೂರನೇ ಟೆಸ್ಟ್
ಇನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೆಲೆಕ್ಟರ್ಸ್ ಬದಲಿ ಆಟಗಾರನ ಆಯ್ಕೆ ಮಾಡುವುದು ಇನ್ನು ಬಾಕಿಯಿದೆ. ಹೈದರಾಬಾದ್ ಟೆಸ್ಟ್ನಲ್ಲಿ ಜಾಕ್ ಲೀಚ್ ಮಂಡಿ ಗಾಯದ ಸಮಸ್ಯೆ ನಡುವೆಯೂ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ್ದರು