ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಸಂಪನ್ನಗೊಂಡ ಬಳಿಕ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ದೇಶದ ವಿವಿದೆಡೆಗಳಿಂದ 200 ವಿಶೇಷ ರೈಲುಗಳನ್ನ ಅಯೋಧ್ಯೆಗೆ ರವಾನಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದ್ದು, ಈ ವಿಶೇಷ ರೈಲುಗಳಿಗೆ ‘ಆಸ್ಥಾ ಸ್ಪೆಷಲ್’ ಎಂದು ಹೆಸರಿಡಲಾಗಿದೆ.
ದೇಶದ ಹಲವು ರಾಜ್ಯಗಳಿಂದ ಅಯೋಧ್ಯೆಗೆ ಆಸ್ಥಾ ವಿಶೇಷ ರೈಲುಗಳು ಸಂಚಾರ ಮಾಡಲಿವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಹಲವು ರಾಜ್ಯಗಳ ಟೈರ್ 1 ಹಾಗೂ ಟೈರ್ 2 ನಗರಗಳಿಂದ ಅಯೋಧ್ಯಾ ಧಾಮ ರೈಲು ನಿಲ್ದಾಣಕ್ಕೆ ರೈಲುಗಳು ಸಂಚಾರ ಮಾಡಲಿವೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಬಳಿಕ 100 ದಿನಗಳ ಕಾಲ ಈ ವಿಶೇಷ ರೈಲುಗಳು ಸಂಚಾರ ಮಾಡಲಿವೆ.
‘ಆಸ್ತಾ ವಿಶೇಷ ರೈಲು’ ಏರಲು ಸಾಧ್ಯವಾಗುವ ಸ್ಥಳ-ರಾಜ್ಯದ ವಿವರ
* ಉತ್ತರ ಭಾರತ: ದೆಹಲಿ, ಜಮ್ಮು, ಹರಿದ್ವಾರ, ಕತ್ರಾ ಮತ್ತು ಋಷಿಕೇಶ * ಪೂರ್ವ ಭಾರತ: ಕೋಲ್ಕತ್ತಾ, ಪಾಟ್ನಾ, ಗುವಾಹಟಿ ಮತ್ತು ಭುವನೇಶ್ವರ * ಪಶ್ಚಿಮ ಭಾರತ: ಮುಂಬೈ, ಪುಣೆ, ಉಜ್ಜಯಿನಿ, ಇಂದೋರ್ ಮತ್ತು ಅಹಮದಾಬಾದ್ * ದಕ್ಷಿಣ ಭಾರತ: ಚೆನ್ನೈ, ಬೆಂಗಳೂರು, ಮೈಸೂರು, ಮಧುರೈ ಮತ್ತು ಹೈದರಾಬಾದ್ * ಮಧ್ಯ ಭಾರತ: ನಾಗ್ಪುರ, ಭೋಪಾಲ್, ಶಿರಡಿ ಹಾಗೂ ಜಬಲ್ಪುರ
ಫೆ.9ಕ್ಕೆ ಅಯೋಧ್ಯೆಯತ್ತ ಮೊದಲ ‘ಆಸ್ತಾ ರೈಲು’ ಪ್ರಯಾಣ
ಇದೇ ಫೆಬ್ರವರಿ 9ರಿಂದ ಬೆಳಗ್ಗೆ 10 ಗಂಟೆಗೆ ಕೇರಳದಿಂದ ಅಯೋಧ್ಯೆಗೆ ಮೊದಲ ಆಸ್ತಾ ವಿಶೇಷ ರೈಲು ಸಂಚಾರವು ಕೊಚುವೇಲಿ ರೈಲು ನಿಲ್ದಾಣದಿಂದ ತೆರಳಿದೆ. ಇದೇ ತಿಂಗಳ ಫೆಬ್ರವರಿಯಲ್ಲಿ ಪಂಜಾಬ್ನಿಂದ ನಾಲ್ಕು ವಿಶೇಷ ಆಸ್ತಾ ರೈಲುಗಳು ಭಕ್ತರನ್ನು ಅಯೋಧ್ಯೆಗೆ ಕರೆದೊಯ್ಯಲಿವೆ. ಪಠಾಣ್ಕೋಟ್ ಮತ್ತು ಅಯೋಧ್ಯೆ ನಡುವೆ ಎರಡು ವಿಶೇಷ ರೈಲುಗಳು ಮತ್ತು ಚಂಡೀಗಢ ಮತ್ತು ನಂಗಲ್ ಡ್ಯಾಮ್ನಿಂದ ತಲಾ ಒಂದು ರೈಲುಗಳು ಕಾರ್ಯ ನಿರ್ವಹಿಸಲಿವೆ. ಮೊದಲ ಆಸ್ತಾ ವಿಶೇಷ ರೈಲು ಫೆಬ್ರವರಿ 9 ರಂದು ಬೆಳಗ್ಗೆ 7:05 ಕ್ಕೆ ಪಠಾಣ್ಕೋಟ್ನಿಂದ ತನ್ನ ಮೊದಲ ಪ್ರಯಾಣ ಆರಂಭಿಸಿತು ಎಂದು ರೈಲ್ವೆ ಇಲಾಖೆ ವೇಳಾಪಟ್ಟಿ ತಿಳಿಸಿದೆ.