2009ರಲ್ಲಿ ತೆರೆಕಂಡ ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನು ರಕುಲ್ ಪ್ರೀತ್ ಸಿಂಗ್ ಫೆ.21ರಂದು ಗೋವಾದಲ್ಲಿ ವರಿಸಲಿದ್ದಾರೆ.
ಬಾಲಿವುಡ್ ನ ಅನೇಕ ನಟಿಯರು ವಿದೇಶಗಳಲ್ಲಿ ಮದುವೆ ಪ್ಲ್ಯಾನ್ ಮಾಡಿದ್ದರೆ, ರಕುಲ್ ಮಾತ್ರ ಗೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಈಗಾಗಲೇ ಆಹ್ವಾನ ಕೂಡ ನೀಡಲಾಗಿದೆ.
ಕನ್ನಡ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ಬಳಿಕ ತೆಲುಗು, ತಮಿಳು ಹಾಗೂ ಬಾಲಿವುಡ್ನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅದಾದ ಬಳಿಕ ತೆಲುಗಿನಲ್ಲಿ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ರಕುಲ್ ಬಳಿಕ ರಾಮ್ ಚರಣ್, ಜೂ ಎನ್ಟಿಆರ್, ತಮಿಳಿನಲ್ಲಿ ಸೂರ್ಯ, ಕಾರ್ತಿ ಇನ್ನೂ ಹಲವಾರು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದಾರೆ.
ಬಾಯ್ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜ್ಯಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಇನ್ಸ್ಟಾಗ್ರಾಮ್ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್ ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ಗೆಳೆಯನ ಜೊತೆಯೆ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ರಕುಲ್-ಜಾಕಿ ಡೆಸ್ಟಿನೇಷನ್ ವೆಡ್ಡಿಂಗ್ ಆಗುತ್ತಿದ್ದು, ರಕುಲ್ರ ಮದುವೆ ಉಡುಗೆಯನ್ನು ಮನೀಷ್ ಮಲ್ಹೋತ್ರಾ ತರುಣ್ ತಲ್ಲಿಯಾನಿ ಅವರುಗಳು ವಿನ್ಯಾಸ ಮಾಡಲಿದ್ದಾರೆ. ಸಬ್ಯಸಾಚಿ ಬ್ರ್ಯಾಂಡ್ನ ಉಡುಗೆಗಳನ್ನು ಸಹ ಮದುವೆಯ ವಿವಿಧ ಸಂದರ್ಭಗಳಲ್ಲಿ ರಕುಲ್ ಹಾಗೂ ಜಾಕಿ ಬಗ್ನಾನಿ ಧರಿಸಲಿದ್ದಾರೆ. ಇವರ ಮದುವೆಯ ಊಟದ ಮೆನ್ಯೂ ಸಹ ಸಖತ್ ಭಿನ್ನವಾಗಿರಲಿದೆಯಂತೆ.