ಸದಾ ಸಖತ್ ಹಾಟ್ ಹಾಟ್ ಆಗಿರುವ ಡ್ರಸ್ ತೊಟ್ಟು ಫೋಟೋಗೆ ಫೋಸ್ ಕೊಡುವ ನಟಿ ಅನನ್ಯಾ ಪಾಂಡೆ ಇದೀಗ ಹಾಟ್ ಡ್ರಸ್ ಮೂಲಕವೇ ಪರಿಸರದ ಪಾಠ ಹೇಳಿಕೊಟ್ಟಿದ್ದಾರೆ.
ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರೀಸ್ ಕೌಂಟರ್ ವೀಕ್ ನಲ್ಲಿ ಭಾಗವಹಿಸಿದ್ದ ಅನನ್ಯಾ ಆಕರ್ಷಕ ಉಡುಪು ಧರಿಸಿ ಗಮನ ಸೆಳೆದಿದ್ದಾರೆ.
ಅನನ್ಯಾ ಕಪ್ಪು ಸ್ಕರ್ಟ್ ಧರಿಸಿ ಚಿಟ್ಟೆ ಮಾದರಿಯ ಟಾಪ್ ಧರಿಸುವ ಮೂಲಕ ಸಾಕಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಉಡುಪಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ಇದು ಸೂಪರ್ ಹೀರೊ ಕಲ್ಪನೆ. ನಾವು ಕೀಟಗಳೊಂದಿಗೂ ಬದುಕುವ ಅವಶ್ಯಕತೆ ಇದೆ ಎಂಬುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಅನನ್ಯಾ ಧರಿಸಿದ್ದ ವಸ್ತ್ರವನ್ನು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಡಿಸೈನ್ ಮಾಡಿದ್ದಾರೆ.