ಸ್ಯಾಂಡಲ್ವುಡ್ ಸೆಂಡ್ರೆಲಾ ನಟಿ ರಾಧಿಕಾ ಪಂಡಿತ್ ವ್ಯಾಲೆಂಟೈನ್ ಮೂಡ್ ನಲ್ಲಿದ್ದಾರೆ. ಪ್ರೇಮಿಗಳ ದಿನ ಹತ್ತಿರವಾಗುತ್ತಿರುವ ಖುಷಿಯಲ್ಲಿರುವ ರಾಧಿಕಾ ಇದೇ ಖುಷಿಯಲ್ಲಿ ಸಖತ್ತಾಗೆ ಫೋಟೋಶೂಟ್ ಮಾಡಿಸಿದ್ದಾರೆ.
ಪತಿ ಯಶ್ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದು, ಸದ್ಯ ನಟಿಯ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಂಪು ಬಣ್ಣದ ಡ್ರೆಸ್ನಲ್ಲಿ ತೊಟ್ಟಿರುವ ನಟಿ ಮಿನುಗುವ ಲೈಟ್ ಮಧ್ಯೆ ಕುಳಿತು ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೋಗಳಿಗೆ ‘ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಪ್ರಾರಂಭವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಷನ್ ನೀಡಿದ್ದಾರೆ. ರಾಧಿಕಾರ ಸುಂದರ ಫೋಟೋ ನೋಡ್ತಿದ್ದಂತೆ ಯಶ್ ಎಲ್ಲಿ? ರಾಕಿ ಬಾಯ್ಗಾಗಿ ಕಾಯುತ್ತಿದ್ದೀರಾ ಅಲ್ವಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಸಾಕಷ್ಟು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ರಾಧಿಕಾ ಹಾಗೂ ಯಶ್ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೋಡಿಗೆ ಐರಾ ಹಾಗೂ ಯಥರ್ವ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವಾಗಿರೋ ರಾಧಿಕಾ ಕಂಬ್ಯಾಕ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ.