ಬೆಂಗಳೂರು:ಬೆಂಗಳೂರು ಸಂಚಾರಿ ಪೊಲೀಸರು ಟ್ರಾಫಿಕ್ಸ ಕಂಟ್ರೋಲ್ ಹಾಗು ವಯಲೇಷನ್ ಕಂಟ್ರೋಲ್ ಮಾಡೋದಕ್ಕೆ ಸಾಕಷ್ಟು ಪ್ರಯತ್ನ ಪಡ್ತಿದಾರೆ. ಸಂಚಾರಿ ನಿಯಮ ಉಲಂಘನೆ ಮಾಡೋರ ವಿರುದ್ಧ ಕಠಿಣ ಕ್ರಮಗಳನ್ನು ಕೂಡ ಕೈಗೊಳ್ತಿದ್ದಾರೆ. ಆದರೆ ಅಫೆನ್ಸ್ ಮಾಡುವವರು ಮಾಡುತ್ತಲೇ ಇದ್ದಾರೆ. ಯಸ್ ಇಲ್ಲೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿರೋದ್ರಲ್ಲಿ ನಗರಕ್ಕೆ ನಂಬರ್ ವನ್ ಅನಿಸಿಕೊಂಡಿದ್ದಾನೆ. ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ.
ಯೆಸ್.. ಸಂಚಾರಿ ಪೊಲೀಸರು ಫೈನ್ ಹಾಕ್ತಿದ್ದಾರೆ ಅದ್ರಲ್ಲೇನು ವಿಶೇಷ ಅಂದುಕೊಳ್ಳಬಹುದು. ಆದರೆ ಫೈನ್ ಹಾಕಿಸಿಕೊಂಡವನ ವಾಹನದ ಟ್ರಾವೆಲ್ ಹಿಸ್ಟರಿ ಕೇಳಿದ್ರೆ ನೀವು ಸಾಕ್ ಆಗೋದು ಪಕ್ಕ… ಈತನ ಗಾಡಿ ಮೇಲಿದ್ದಿದ್ದ ಫೈನ್ ಎಷ್ಟು ಅಂತಾ ಗೊತ್ತಾ .. ಈತನ ಹೆಸ್ರು ವೆಂಕಟ್ರಾಮನ್. ಈ ವ್ಯಕ್ತಿಯ ವಾಹನದ ಮೇಲಿರುವ ಕೇಸ್ ಎಷ್ಟು ಗೊತ್ತಾ ಬರೋಬ್ಬರಿ ಮುನ್ನೂರಕ್ಕೂ ಹೆಚ್ಚು ಕೇಸ್ ಗಳು..
ಹೌದು..ಒನ್ ವೇ ಸಂಚಾರ , ಸಿಗ್ನಲ್ ಜಂಪ್ ,ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಫುಟ್ ಪಾಥ್ ರೈಡಿಂಗ್ .ಒಂದಾ ಎರಡಾ ಪೊಲೀಸ್ ಮ್ಯಾನ್ಯೂವಲ್ ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಅನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿಬಿಟ್ಟಿದ್ದ. ಬೆಂಗಳೂರಿನ ಎಸ್ ಆರ್ ನಗರ , ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಸಂಚಾರಿ ನಿಯಮ ಉಲಂಘನೆ ಮಾಡಿದ್ದಾನೆ.
ಇನ್ನು ಈತನ ವಾಹನದ ಮೇಲೆ ಮುನ್ನೂರು ಕೇಸ್ ದಾಖಲಾಗಿ ಮೂರು ಲಕ್ಷದ 20 ಸಾವಿರ ದಂಡವಿದೆ ಅಂತೆ.. ಈತನ ಗಾಡಿಯ ಬೆಲೆ ಅಬ್ಬಬ್ಬ ಅಂದರೆ 20-25 ಸಾವಿರ ಇರಬಹುದು ಆದರೆ ದಂಡದ ಮೊತ್ತ ಮೂರು ಲಕ್ಷ ಹೀಗಾಗಿ ಗಾಡಿಯನ್ನೇ ಸೀಜ್ ಮಾಡ್ಕೊಳ್ಳಿ ಎಂದು ಹೇಳಿದ್ದ ಈ ಭೂಪ. ಆದರೆ ಪೊಲೀಸರು ದಂಡ ಕಟ್ಟಬೇಕು ಇಲ್ಲಾಂದ್ರೆ ಕೇಸ್ ಮಾಡ್ತಿವಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಸಂಚಾರಿ ಪೊಲೀಸರು ವೆಂಕಟ್ರಾಮನಗೆ ನೋಟಿಸ್ ನೀಡಿದ್ದು , ದಂಡ ಕಟ್ಟಿಲ್ಲ ಅಂದ್ರೆ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧಾರ ಮಾಡಿದ್ದಾರೆ. ಸದ್ಯ ಕಾನೂನು ಉಲ್ಲಂಘಿಸಿ ನಂಬರ್ ವನ್ ಎನಿಸಿಕೊಂಡಿರುವ ಆರೋಪಿಯಂತೆ ಬೆಂಗಳೂರಿನಲ್ಲಿ ದಂಡ ಕಟ್ಟದೆ ಇರುವ ಜನ ಸಾಕಷ್ಟು ಸಂಖ್ಯೆಯಲ್ಲಿರುವ ಸಾಧ್ಯತೆ ಇದೆ.