ಕ್ಯಾನ್ಬೆರಾ: ಆಸೀಸ್ (Australia Under19s) ತವರಿನಲ್ಲೇ ಸೇಡು ತೀರಿಸಿಕೊಳ್ಳುವ ಸದವಕಾಶ ಭಾರತಕ್ಕೆ ಬಂದೊದಗಿದೆ. ಆಸೀಸ್ ತಂಡವನ್ನು ಮಣಿಸಿ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಶತಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಕ್ರೀಡಾಂಗಣದಲ್ಲೂ ನೆರೆದಿರುವ ಟೀಂ ಇಂಡಿಯಾ ಅಭಿಮಾನಿಗಳು ಆಸೀಸ್ಗೆ ತಿರುಗೇಟು ಕೊಡುವಂತೆ ಪೋಸ್ಟರ್ ಹಿಡಿದು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.
19 ವರ್ಷದೊಳಗಿನವರ ವಿಶ್ವಕಪ್ ಫೈನಲ್ (ICC Under-19 World Cup Final) ಪಂದ್ಯವು ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್ಗಳ ಗುರಿ ನೀಡಿದೆ.
ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡುವಂತೆ BCCI ಖಡಕ್ ಸೂಚನೆ..!
ಆಸೀಸ್ ಪರ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್, ಹರ್ಜಾಸ್ ಸಿಂಗ್ 55 ರನ್ (3 ಬೌಂಡರಿ, 3 ಸಿಕ್ಸರ್), ರಿಯಾನ್ ಹಿಕ್ಸ್ 20 ರನ್, ರಾಫ್ ಮ್ಯಾಕ್ಮಿಲನ್ 2 ರನ್, ಚಾರ್ಲಿ ಆಂಡರ್ಸನ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್, ಟಾಮ್ ಸ್ಟ್ರೇಕರ್ 8 ರನ್ ಗಳಿಸಿ ಅಜೇಯರಾಗುಳಿದರು.
ಇನ್ನೂ ಆಸೀಸ್ ಪರ ಬೌಲಿಂಗ್ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್ಗಳಲ್ಲಿ 38 ರನ್ ಬಿಟ್ಟುಕೊಟ್ಟು 3 ರನ್ ಪಡೆದರು. ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.