ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಮಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಇದನ್ನೇ ಬಳಸಿಕೊಂಡಿರೋ ವಂಚಕರು ವಂಚನೆಗೆ ಇಳಿದಿದ್ದಾರೆ.
ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ನೀಡಿದ್ದಾರೆ.
ವ್ಯಕ್ತಿಯೋರ್ವ ಸಿತಾರಾ ಗಟ್ಟಿಮನೇನಿಯ ಚಿತ್ರ, ವಿಡಿಯೋ ಹಾಗೂ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ಲಿಂಕ್ಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳ ಮಾರಾಟ, ಲೋನ್ ಕೊಡಿಸುವುದಾಗಿ ಹೇಳಿ ಲಿಂಕ್ ಕಳಿಸುವುದು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹೂಡಿಕೆ ಐಡಿಯಾಗಳನ್ನು ಕೊಡುವುದಾಗಿ ಹೇಳಿಕೊಂಡು ಹಲವರನ್ನು ಸಂಪರ್ಕ ಮಾಡಿದ್ದಾನೆ.
ಸದ್ಯ ಪೊಲೀಸರು ವಂಚನೆ ಎಸಗಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಬಂದ ಹೂಡಿಕೆ ಮಾಹಿತಿಯನ್ನು ನಿಜವೆಂದು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಮಹೇಶ್ ಬಾಬು ತಂಡ ತಿಳಿಸಿದೆ.